Connect with us

Dvgsuddi Kannada | online news portal | Kannada news online

ದಾವಣಗೆರೆ: ರೈತರಿಗೆ ಸಿಹಿ ಸುದ್ದಿ; ಹನಿ ನೀರಾವರಿ ಸಹಾಯ ಧನಕ್ಕೆ ಅರ್ಜಿ ಆಹ್ವಾನ

drip irrigation

ಚನ್ನಗಿರಿ

ದಾವಣಗೆರೆ: ರೈತರಿಗೆ ಸಿಹಿ ಸುದ್ದಿ; ಹನಿ ನೀರಾವರಿ ಸಹಾಯ ಧನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ: ತೋಟಗಾರಿಕೆ ಇಲಾಖೆಯಿಂದ 2021-22  ನೇ ಸಾಲಿನಲ್ಲಿ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ  ಅನುಷ್ಠಾನಗೊಳುಸುತ್ತಿರುವ ಕೇಂದ್ರ ಪುರಸ್ಕೃತ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ  ಅರ್ಹ  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ/ಅತಿ ಸಣ್ಣ ಹಾಗೂ ಇತರೆ ಹಿಂದುಳಿದ ವರ್ಗದ   ರೈತರಿಂದ  ಅರ್ಜಿಯನ್ನು ಆಹ್ವಾನಿಸಲಾಗಿದೆ.

ತೋಟಗಾರಿಕೆ ಬೆಳೆಯನ್ನು ಬೆಳೆಯುತ್ತಿರುವ ಎಲ್ಲಾ ವರ್ಗದ ರೈತರಿಗೆ (ಕಾಫಿ,ಟೀ ಹಾಗೂ ರಬ್ಬರ್ ಬೆಳೆಗಳನ್ನು ಹೊರತುಪಡಿಸಿ) ಹನಿ ನೀರಾವರಿ ಅಳವಡಿಸಿದ  ಪ್ರತಿ ಫಲಾನುಭವಿಗೆ ಗರಿಷ್ಟ 5 ಹೆಕ್ಟೇರ್ ಪ್ರದೇಶದ ವರೆಗೆ ಸಹಾಯಧನವನ್ನು ನೀಡಲಾಗುವುದು ಹಾಗೂ ತರಕಾರಿ ಮತ್ತು ಹೂ ಬೆಳೆಗಳಿಗೆ ಗರಿಷ್ಟ 2 ಹೆಕ್ಟೇರ್ ಪ್ರದೇಶಕ್ಕೆ ಸಹಾಯಧನ ನೀಡಲಾಗುವುದು. ಸೂಕ್ಮ ನೀರಾವರಿ ಘಟಕ ಅಳವಡಿಸಿದ  ಅರ್ಹ  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ/ಅತಿ ಸಣ್ಣ ರೈತ ಫಲಾನುಭವಿಗಳಿಗೆ ಮೊದಲ 2 ಹೆಕ್ಟೇರ್ ಪ್ರದೇಶದವರೆಗೆ ಶೇ 90% ರಷ್ಟು (ಸೀಲಿಂಗ್ ಲಿಮಿಟ್ ರಂತೆ) ಮತ್ತು 2 ಹೆಕ್ಟೇರ್ ಮೇಲ್ಪಟ್ಟು  ( ಗರಿಷ್ಟ 5 ಹೆಕ್ಟೇರ್)  ಶೇ. 45 ರಷ್ಟು ಸಹಾಯಧನ ನೀಡಲು ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ರೈತ ಸಂರ‍್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳು ಸಂಪರ್ಕಿಸಲು ಕೋರಿದೆ. 2021-22ನೇ ಸಾಲಿನಲ್ಲಿ ನಿಗದಿ ಪಡಿಸಿರುವ  ಅರ್ಥಿಕ ಗುರಿಯ ಅನುಸಾರ ಆಯಾ ಅರ್ಹ ರೈತರ ಅರ್ಜಿ ಸ್ವೀಕರಿಸಲಾಗುವುದು.   ಅರ್ಜಿಯನ್ನು 21-09-2021 ರಿಂದ ಸ್ವೀಕರಿಸಲಾಗುವುದು.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಚನ್ನಗಿರಿ

ದಾವಣಗೆರೆ

Advertisement
Advertisement Enter ad code here

Title

To Top