ಬೆಂಗಳೂರು : ನಾನು ಮಗಳಿಗೆ ಯಾವುದೇ ಬೆದರಿಕೆ ಹಾಕಿಲ್ಲ. ಹಣಕ್ಕಾಗಿ ಪೀಡಿಸಿಲ್ಲ. ಕಾಲಿಲ್ಲದೇ ನಡೆಯೋದಕ್ಕೂ ಆಗೋದಿಲ್ಲ. ಇಂತಹ ಸ್ಥಿತಿಯಲ್ಲಿ ರೌಡಿಗಳ ಜೊತೆಗೆ ಏನ್ ಕೆಲಸ? ಹಣ ಕೊಟ್ಟಿದ್ದ ಬಗ್ಗೆ ಸಾಕ್ಷಿಗಳಿದ್ದರೇ ತೋರಿಸಲಿ ಎಂದು ಹಿರಿಯ ನಟ ಸತ್ಯಜಿತ್ ಹೇಳಿದ್ದಾರೆ. ಸ್ಯಾಂಡಲ್ ವುಡ್ ಹಿರಿಯ ನಟ ಸತ್ಯಜಿತ್ ವಿರುದ್ಧ ಪುತ್ರಿಯಿಂದಲೇ ದೂರು ದಾಖಲು
ರೌಡಿಗಳಿಂದ ನನಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸತ್ಯಜಿತ್ ಮಗಳು ದೂರು ದಾಖಲಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದಂತ ನಟ ಸತ್ಯಜಿತ್, ಕಷ್ಟ ಪಟ್ಟು ಓದಿಸಿದ್ದೇನೆ. ಮಗಳನ್ನು ಪೈಲಟ್ ಮಾಡಿಸಿದ್ದೇನೆ. ಬೆಳಸಿದ ಮಗಳಿಂದಲೇ ಹಿಂಸೆ ಪಡುತ್ತಿದ್ದೇನೆ. ಮನೆ ಮಾರಿ ಮಗಳನ್ನು ಓದಿಸಿದ್ದೆ. ಮದುವೆ ಬಳಿಕ ಮಗಳು ನಮ್ಮನ್ನು ದೂರ ಮಾಡಿದ್ದಾಳೆ ಎಂದಿದ್ದಾರೆ.
ನನಗೆ ಹಣ ಕೊಟ್ಟಿದ್ದರೆ ಸಾಕ್ಷಿ ತೋರಿಸಲಿ. ದೂರಿಗೂ ಮುನ್ನ ಮಾತನಾಡಲು ಹೋಗಿದ್ದೆ. ಮಾತನಾಡಲು ಹೋಗಿದ್ದಾಗ ಹಲ್ಲೆಗೆ ಮುಂದಾಗಿದ್ದಳು ಎಂದು ತಿಳಿಸಿದ್ದಾರೆ.



