ವಿಶ್ವಸಂಸ್ಥೆ: ಕೊರೊನಾ ತತ್ತರಿಸಿ ಹೋಗಿರುವ ಭಾರತಕ್ಕೆ ನೆರವು ನೀಡಲು ವಿಶ್ವಸಂಸ್ಥೆ ಮುಂದೆ ಬಂದಿದೆ. ತನ್ನ ಅಂಗಸಂಸ್ಥೆಯಾದ ಯುನಿಸೆಫ್ ಮೂಲಕ 3,000 ಆಕ್ಸಿಜನ್ ಕಾನ್ಸನ್ ಟ್ರೇಟರ್‌ಗಳು ಸೇರಿದಂತೆ ರೋಗ ಪತ್ತೆಯ ಕಿಟ್ ನೀಡಲು ಮಂದಾಗಿದೆ. ಕೊರೊನಾ ನಿಯಂತ್ರಿಸಲು ಭಾರತ ಸರ್ಕಾರಕ್ಕೆ ಅಗತ್ಯ ಬೆಂಬಲ ನೀಡುವುದಾಗಿ ಯುನಿಸೆಫ್ ಹೇಳಿದೆ.
ಈ ಬಗ್ಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯವರ ಉಪ ವಕ್ತಾರ ಫರ್ಹಾನ್ ಹಕ್, ವಿಶ್ವಸಂಸ್ಥೆ ಕೋವಿಡ್ ವಿರುದ್ಧ ಹೋರಾಟದಲ್ಲಿ ಭಾರತಕ್ಕೆ ಬೆಂಬಲವಾಗಿ ನಿಲ್ಲಲಿದೆ. ಈಗಿರುವ ಬೆಂಬಲವನ್ನು ಹೆಚ್ಚಿಸಲು ಸಿದ್ಧವಾಗಿದ್ದೇವೆ ಎಂದಿದ್ದಾರೆ. ಇನ್ನು ಭಾರತದ ಈಶಾನ್ಯ ರಾಜ್ಯಗಳು ಮತ್ತು ಮಹಾರಾಷ್ಟ್ರದಲ್ಲಿ 25 ಆಕ್ಸಿಜನ್ ಉತ್ಪಾದಕ ಘಟಕಗಳನ್ನು ಸ್ಥಾಪಿಸಲು ಯುನಿಸೆಫ್ ನೆರವು ನೀಡಿದೆ.