ಬೆಂಗಳೂರು: ರಾಜ್ಯದ ಮೊದಲ ಎಲೆಕ್ಟ್ರಿಕ್ ಬಸ್ ಇಂದು ಬೆಂಗಳೂರಿಗೆ ಬಂದಿಳಿದಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ 90 ಮಿನಿ ಬಸ್ ಓಡಿಸಲು ಬಿಎಂಟಿಸಿ ನಿರ್ಧಾರ ಕೈಗೊಂಡಿದೆ.
ಜೆಬಿಎಂ ಕಂಪನಿ ಮೂಲಕ ಗುತ್ತಿಗೆ ಒಪ್ಪಂದ ಬಸ್ ಪಡೆಯಲಾಗಿದ್ದು, ಬಸ್ ಪರೀಕ್ಷಾರ್ಥ ಸಂಚಾರವು ಇಂದು ಬಿಎಂಟಿಸಿ ಕೆಂಗೇರಿ ಘಟಕದಲ್ಲಿ ನಡೆಸಲಾಯಿತು. ಶ್ರೀರಾಮುಲು, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ,ಉಪಾಧ್ಯಕ್ಷ ಎಂ.ಆರ್. ವೆಂಕಟೇಶ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶರು ಬಸ್ ನಲ್ಲಿ ಕುಳಿತು ಒಂದು ಸುತ್ತು ಸಂಚರಿಸಿದರು.
34 ಆಸನಗಳ ಈ ಬಸ್ ನಲ್ಲಿ ಎರಡು ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಆರು ಬ್ಯಾಟರಿಗಳ ಸಹಾಯದಲ್ಲಿ ಬಸ್ ಸಂಚರಿಸಲಿದೆ. ಒಮ್ಮೆ ಚಾರ್ಜ್ ಮಾಡಿದರೆ 120 ಕಿಲೋ ಮೀಟರ್ ಸಂಚರಿಸುವ ಸಾಮರ್ಥ್ಯ ಹೊಂದಿದೆ.ನ.1ಕ್ಕೆ 10 ಬಸ್‌ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಾರ್ವಜನಿಕ ಸೇವೆಗೆ ಸಮರ್ಪಿಸುವರು.ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲಾ 90 ಬಸ್‌ಗಳು ರಸ್ತೆಗೆ ಇಳಿಯಲಿ ಎಂದು ಎಂದು ಸಾರಿಗೆ ಸಚಿವ ಶ್ರೀ ರಾಮುಲು ತಿಳಿಸಿದರು.



