ದಾವಣಗೆರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿ ಹೊರಡಿಸಿದ 2020-21 ಶೈಕ್ಷಣಿಕ ಸಾಲಿನ ರ‍್ಯಾಂಕ್ ಗಳ ಪಟ್ಟಿಯಲ್ಲಿ ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಬಯೋಟೆಕ್ನಾಲಜಿ ವಿಭಾಗಕ್ಕೆ ಎರಡು ರ‍್ಯಾಂಕ್ ಗಳು ಲಭಿಸಿದೆ.
ವಿಟಿಯು ಮಟ್ಟದಲ್ಲಿ ಬಯೋಟೆಕ್ನಾಲಜಿ ಇಂಜಿನಿಯರಿಂಗ್ ವಿಭಾಗದಿಂದ ಮೊದಲನೇ ಮತ್ತು ಐದನೇ ರ‍್ಯಾಂಕ್ ಗಳು ಲಭಿಸಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ ವೈ ವಿಜಯಕುಮಾರ ತಿಳಿಸಿದ್ದಾರೆ.ಮೋನಿಷಾ ಜಿ ಮೊದಲನೇ ರ‍್ಯಾಂಕ್ ಮತ್ತು ಧನ್ಯಶ್ರೀ ಆರ್ ಐದನೇ ರ‍್ಯಾಂಕ್ ಗಳಿಸಿದ್ದಾರೆ.
ಮೋನಿಷಾ ಜಿ ಮೊದಲನೇ ರ‍್ಯಾಂಕ್ ಜೊತೆಗೆ ವಿಟಿಯು ಗೋಲ್ಡ್ ಮೆಡಲ್ ಮತ್ತು ಎ ಸಿ ಜಯಣ್ಣ ಗೋಲ್ಡ್ ಮೆಡಲ್ ಪಡೆದಿರುತ್ತಾರೆ ಎಂದು ವಿಭಾಗದ ಮುಖ್ಯಸ್ಥರಾದ ಡಾ ಪ್ರಕಾಶ್ ಕೆ ಕೆ ತಿಳಿಸಿದರು. ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಕಾಲೇಜಿನ ಚೇರ್ಮನ್ ಜಿ ಎಂ ಲಿಂಗರಾಜು, ಆಡಳಿತಾಧಿಕಾರಿ ವೈ ಯು ಸುಭಾಶ್ಚಂದ್ರ, ಉದ್ಯೋಗ ಮತ್ತು ತರಬೇತಿ ವಿಭಾಗದ ಮುಖ್ಯಸ್ಥರಾದ ತೇಜಸ್ವಿ ಕಟ್ಟಿಮನಿ ಟಿ ಆರ್, ಎಲ್ಲಾ ವಿಭಾಗಗಳ ಮುಖ್ಯಸ್ಥರು ಗಳು, ಅಧ್ಯಾಪಕ ವರ್ಗದವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.