ಬೆಂಗಳೂರು: ಕುರುಬ ಸಮುದಾಯವನ್ನು ಎಸ್ಟಿ ಮೀಸತಿಗೆ ಸೇರಿಸುವುದರ ಹಿಂದೆ ಆರ್ಎಸ್ ಎಸ್ ಇದೆ. ಈ ಬಗ್ಗೆ ಆರು ವರ್ಷಗಳ ಹಿಂದೆಯೇ ಕೇಂದ್ರಕ್ಕೆ ಶಿಫಾರಸು ಮಾಡಿದ್ದೇವೆ. ಇದನ್ನೇ ಈಶ್ವರಪ್ಪ ಇನ್ನೂ ಮೀಸಲು ಮಾಡಿಸಿಲ್ಲ. ಈಗ ಸಮುದಾಯ ವಿಭಾಗ ಮಾಡುವುದಕ್ಕೆ ಈ ಪ್ರಯತ್ನ ನಡೆಸುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುರುಬ ಸಮುದಾಯವನ್ನು ಎಸ್ಟಿ ಹೋರಾಟಕ್ಕೆ ಸೇರಿಸುವುದಕ್ಕೆ ನಮ್ಮದೇನು ಅಭ್ಯಂತರವಿಲ್ಲ. 6 ವರ್ಷದ ಹಿಂದೆಯೇ ನಾವು ಕಳಿಸಿದ್ದನ್ನು, ಇನ್ನೂ ಯಾಕಪ್ಪಾ ಮಾಡಿಸಿಲ್ಲ ಎಂದು ಪ್ರಶ್ನಿಸಿದರು. ಮಂಡಲ್ ಕಮೀಷನ್, ಚಿನ್ನಪ್ಪ ಆಯೋಗದ ವರದಿ ವಿರೋಧಿಸಿದ್ದರು. ಆರ್ ಎಸ್ ಎಸ್, ಬಿಜೆಪಿ ಮೀಸಲಾತಿಗೆ ವಿರುದ್ಧ ಇವೆ. ಕುರುಬರಿಗೆ ಎಸ್ಟಿ ಮೀಸಲು ಕೇಳಿದರೆ ಆಗಲ್ಲ. ಇರುವ 3 ರಷ್ಟು ಅನ್ನು 20 ಪರ್ಸೆಂಟ್ ಮಾಡಿ ಅಂತ ಕೇಳಬೇಕು. ಯಾಕೆ ಅದನ್ನ ಕೇಳೋಕೆ ಇವರಿಗೆ ಆಗಲ್ವಾ?. ಎಸ್ಸಿ,ಎಸ್ಟಿ ಶೇ 24ರಷ್ಟು ಮೀಸಲಾತಿ ಕೊಡಬೇಕು. ನಾಗಮೋಹನ್ ದಾಸ್ ವರದಿಯಂತೆ ಕೊಡಬೇಕು. ಜಾತಿ ಗಣತಿಯನ್ನು ಯಾಕೆ ಸ್ವೀಕರಿಸುತ್ತಿಲ್ಲ. ಮೊದಲು ವರದಿ ಸ್ವೀಕರಿಸಿಕೊಳ್ಳಲಿ ಎಂದರು.
ಈಶ್ವರಪ್ಪಗೆ ಇದ್ದಕ್ಕಿದ್ದಂತೆ ಕುರುಬರ ಬಗ್ಗೆ ಕಾಳಜಿ ಬಂದಿದೆ. ಸ್ವಾಮೀಜಿ ಕರೆದು ಪಾದಯಾತ್ರೆ ಮಾಡ್ತಿದ್ಯಲ್ಲಾ. ಮಠ ಮಾಡಿದಾಗ ಎಲ್ಲಿಗೆ ಹೋಗಿದ್ದಪ್ಪಾ? ಕನಕ ಗೋಪುರ ಕೆಡವಿದಾಗ ಎಲ್ಲಿಗೆ ಹೋಗಿದ್ಯಪ್ಪಾ ಈಶ್ವರಪ್ಪ? ಮಂಡಲ್ ಕಮೀಷನ್ ಬಗ್ಗೆ ಏನಾದ್ರೂಮಾತನಾಡಿದ್ಯಾ? ರಾಮಾಜೋಯಿಸ್ ಸುಪ್ರೀಂನಲ್ಲಿ ಚಾಲೆಂಜ್ ಮಾಡಿದ್ದರು. ಆಗ ನೀನು ಎಲ್ಲಿಗೆ ಹೋಗಿದ್ದಪ್ಪಾ ಈಶ್ವರಪ್ಪ? ಆಗಲೂ ಬಿಜೆಪಿಯಲ್ಲೇ ಈಶ್ವರಪ್ಪ ಇರಲಿಲ್ವಾ? ರಾಮಜೋಯಿಸ್ ಬಿಜೆಪಿಯವರಲ್ವೇ? ರಾಮಾಜೋಯಿಸ್ ಅವರ ವಿರುದ್ಧ ಯಾಕೆ ಮಾತನಾಡಲಿಲ್ಲ. ಹಿಂದುಳಿದವರ ವಿರುದ್ಧ ರಾಮಾ ಜೋಯಿಸ್ ಚಾಲೆಂಜ್ ಮಾಡಿದ್ದರು. ನೀನು ಯಾಕೆ ಸುಮ್ಮನಿದ್ದೆ ಈಶ್ವರಪ್ಪ? ಪಾಪ ಮುಗ್ದ ಜನರಿಗೆ ಮೋಸ ಮಾಡ್ತಿದ್ಯಾ? ಈಶ್ವರಪ್ಪಾ ಪ್ರಭಾವಿ ನಾಯಕ ಅಂತ ಯಾರು ಹೇಳಿದ್ದು? ಪ್ರಭಾವಿ ನಾಯಕ ಅಂತ ಯಾಕೆ ಕರೆತೀಯಪ್ಪಾ? ಸದನದ ಹೊರಗೆ,ಒಳಗೆ ಏನಾದರೂ ಮಾತನಾಡಿದ್ರಾ? ಹಾಗಾದರೆ ಈಶ್ವರಪ್ಪ ಎಲ್ಲಿ ನಾಯಕ ಆಗೋಕೆ ಸಾಧ್ಯ ಎಂದು ಪ್ರಶ್ನಿಸಿದರು.
ಮೀಸಲಾತಿ ಹೋರಾಟ ಈಶ್ವರಪ್ಪನ ಸ್ವಂತ ಬುದ್ಧಿಯದಲ್ಲ. ಆರ್ ಎಸ್ ಎಸ್ ನವರು ಇವರನ್ನು ಬಳಸಿಕೊಳುತ್ತಿದ್ದಾರೆ. ಇದರ ಹಿಂದೆ ಇರೋದು ಸಂತೋಷ್, ಹೊಸಬಾಳೆ, ಆರ್ ಎಸ್ ಎಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.