ಬೆಂಗಳೂರು: ಹಿಜಾಬ್ ಇಲ್ಲದೆ ನಾವು ಕಾಲೇಜಿಗೆ ಹೋಗಲ್ಲ. ಕುರಾನ್ ಹೇಳಿದ್ದೇ ನಮಗೆ ಫೈನಲ್ ಎಂದು ಹಿಜಾಬ್ ಪ್ರಕರಣ ಕುರಿತು ಹೈಕೋರ್ಟ್ ಮೆಟ್ಟಿಲೇರಿದ್ದ ಉಡುಪಿ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನ 6 ಮುಸ್ಲಿಂ ವಿದ್ಯಾರ್ಥಿನಿಯರು ಹೇಳಿಕೆ ನೀಡಿದ್ಧಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದ್ಯಾರ್ಥಿಗಳು, ಶಾಲಾ-ಕಾಲೇಜುಗಳಿಗೆ ಹಿಜಾಬ್ ಧರಿಸಿಕೊಂಡು ಹೋಗಲು ಅವಕಾಶ ಕೊಡಬೇಕು. ನಮ್ಮ ಹಕ್ಕಿಗಾಗಿ ಹೋರಾಟ ನಿಲ್ಲುವುದಿಲ್ಲ ಎಂದಿದ್ದಾರೆ. ಕೋರ್ಟ್ನಲ್ಲಿ ನ್ಯಾಯ ಸಿಗುವ ಭರವಸೆ ಇತ್ತು, ತೀರ್ಪು ವಿರುದ್ಧವಾಗಿ ಬಂದಿದೆ. ನಾವು ಯಾವುದೇ ಕಾರಣಕ್ಕೂ ಹಿಜಾಬ್ ಇಲ್ಲದೆ ಕಾಲೇಜಿಗೆ ಹೋಗಲ್ಲ ಎಂದರು.
ಹೆಣ್ಣುಮುಕ್ಕಳು ಮನೆಯಿಂದ ಹೊರಬರುವಾಗ ತಲೆ-ಎದೆಭಾಗವನ್ನು ಮುಚ್ಚಬೇಕು ಎಂದು ಕುರಾನ್ನಲ್ಲಿದೆ. ನಮಗೆ ಅದೇ ಫೈನಲ್. ರಾಜಕೀಯ ಉದ್ದೇಶಕ್ಕಾಗಿ ಇದನ್ನು ದೊಡ್ಡದು ಮಾಡಲಾಯಿತು. ಕಾಲೇಜಿನ ಕಾಂಪೌಂಡಿನ ಒಳಗೇ ಈ ಸಮಸ್ಯೆಯನ್ನ ಬಗೆಹರಿಸಬಹುದಿತ್ತು ಎಂದರು.
ಸರ್ಕಾರ ಕೋರ್ಟ್ ಮೇಲೆ ಒತ್ತಡ ಹಾಕಿದೆ. ಇದು ಅಸಂವಿಧಾನಿಕವಾದ ತೀರ್ಪು. ನಾವು ಜಾತ್ಯಾತೀತ ದೇಶದಲ್ಲಿದ್ದೇವೆ. ಎಲ್ಲಾ ಧರ್ಮಕ್ಕೆ ಎಲ್ಲರೂ ಗೌರವ ಕೊಡಬೇಕು ಎಂದಿದ್ದಾರೆ.



