
ಡಿವಿಜಿಸುದ್ದಿ.ಕಾಂ, ದಾವಣಗೆರೆ: ಹಿಂದೂ ಮಹಾ ಗಣಪತಿ ಸಮಿತಿಯಿಂದ ಹೈಸ್ಕೂಲ್ ಮೈದಾನದಲ್ಲಿ ಅನ್ನ ಸಂತಪರ್ಣಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಸಮಿತಿ ಅಧ್ಯಕ್ಷ ಜೊಳ್ಳಿ ಗುರು, ಸಮಿತಿಯ ಹಿರಿಯ ಮಾರ್ಗದರ್ಶಕರಾದ ವೇದಮೂರ್ತಿ ಅವರು ಚಾಲನೆ ನೀಡಿದರು. ಮಹಾನಗರ ಪಾಲಿಕೆ ಸದಸ್ಯ ಬಸವರಾಜು ವಿ. ಶಿವಗಂಗಾ ಸೇರಿದಂತೆ ಅನೇಕ ಯುವ ಮುಖಂಡರು ಭಾಗಿಯಾಗಿದ್ದರು. ಸಾವಿರಾರು ಭಕ್ತಾಧಿಗಳು ಪ್ರಸಾದ ಸ್ವೀಕರಿಸಿದರು. ನಾಳೆ ಬೆಳಗ್ಗೆ ೧೦ ಗಂಟೆಗೆ ಹೈಸ್ಕೂಲ್ ಮೈದಾನದಿಂದ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದ್ದು, ಅಪಾರ ಸಂಖ್ಯೆಯಲ್ಲಿ ಭಕ್ತಾಧಿಗಳು ಭಾಗಿಯಾಗಬೇಕು ಎಂದು ಕೋರಲಾಗಿದೆ. ಶನಿವಾರದಂದು 2ನೇ ವರ್ಷದ ಹಿಂದೂ ಮಹಾ ಗಣಪತಿ ವಿಸರ್ಜನೆ ನಡೆಯಲಿದೆ.







