Connect with us

Dvgsuddi Kannada | online news portal | Kannada news online

ದಾವಣಗೆರೆ ಗಣಪತಿ ವಿಶೇಷ: ಧರ್ಮಸ್ಥಳ ಮಾದರಿ ಮಂಟಪ, ನವಿಲುಗರಿಯ ಗಣೇಶ

Home

ದಾವಣಗೆರೆ ಗಣಪತಿ ವಿಶೇಷ: ಧರ್ಮಸ್ಥಳ ಮಾದರಿ ಮಂಟಪ, ನವಿಲುಗರಿಯ ಗಣೇಶ

ಡಿವಿಜಿ ಸುದ್ದಿ.ಕಾಂ, ದಾವಣಗೆರೆ: ವಿಜ್ಞ ವಿನಾಶಕ, ವಿಜ್ಞ ನಿವಾರಕ ಎಂದೆಲ್ಲಾ ಕರೆಸಿ ಕೊಳ್ಳುವ ಗಣೇಶ ಚತುರ್ಥಿ ಬಂದರೆ ಸಾಕು ವೈವಿಧ್ಯಮಯ ಗಣೇಶ ಮೂರ್ತಿಗಳು ಪ್ರತಿಷ್ಟಾಪನೆಗೊಳ್ಳುವುದು ಸಾಮಾನ್ಯ.

ಅದರಲ್ಲೂ ಬೆಣ್ಣೆನಗರಿ ದಾವಣಗೆರೆಯ ಹಿಂದೂ ಮಹಾಗಣಪತಿ ಸಮಿತಿ ಪ್ರತಿ ವರ್ಷವೂ ವಿಶೇಷ ರೀತಿಯಲ್ಲಿ ಗಣೇಶ ಪ್ರತಿಷ್ಟಾಪಿಸುತ್ತಾ ಬರುತ್ತಿದೆ. ಯೆಸ್…, ಈ ಬಾರಿ ಕೂಡ ವಿಶೇಷತೆಯಿಂದ ಕೂಡಿದ್ದು, ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ ಮಾದರಿಯಲ್ಲಿಯೇ ಮಂಟಪ ನಿರ್ಮಾಣ ಮಾಡಲಾಗಿದೆ.

ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಪ್ರತಿಷ್ಟಾಪಿಸಿರುವ ಗಣೇಶ ಮಂಟಪ ಧರ್ಮಸ್ಥಳ ಮೂಲ ಕ್ಷೇತ್ರವನ್ನು ನಾಚಿಸುವಂತಿದ್ದು, ಎಲ್ಲರನ್ನು ಆರ್ಷಿಸುತ್ತಿದೆ.

ಕೋಲ್ಕತ್ತಾ ಮೂಲದ 18 ಜನರ ತಂಡ ಸತತ 45 ದಿನಗಳ ಕಾಲ ಕೆಲಸ ಮಾಡಿ, 20 ಲಕ್ಷ ವೆಚ್ಚದಲ್ಲಿ ಈ ಬೃಹತ್ ಧರ್ಮಸ್ಥಳ ಮಾದರಿ ಮಂಟಪ ನಿರ್ಮಿಸಿದ್ದಾರೆ. 45 ಅಡಿ ಎತ್ತರ, 160 ಅಡಿ ಅಗಲ, 120 ಅಡಿ ಉದ್ದದ ಈ ಬೃಹತ್ ಮಂಟಪ ಧರ್ಮಸ್ಥಳದ ಮೂಲ ಮಾದರಿಯನ್ನು ನಾಚಿಸುವಂತಿದೆ. ಈ ಬೃಹತ್ ಮಂಟಪದಲ್ಲಿ 15 ಅಡಿ ಎತ್ತರದ ಪರಿಸ್ನೇಹಿ ಗಣೇಶ ಮೂರ್ತಿಯನ್ನು ಪ್ರತಿಷ್ಟಾಪಿಸಿದ್ದು, ಗಣೇಶ ಮೂರ್ತಿಯ ಜೊತೆಗೆ 10 ಅಡಿ ಎತ್ತರದ ಮಂಜನಾಥ್ ಸ್ವಾಮೀಯ ಮೂರ್ತಿ ನಿರ್ಮಿಸಲಾಗಿದ್ದು, ಮತ್ತೊಂದು ವಿಶೇಷ. 21 ದಿನಗಳ ಕಾಲ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಳಲಾಗಿದೆ. ಅಷ್ಟೇ ಅಲ್ಲದೇ 21 ದಿನಗಳೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು ಅದರಲ್ಲಿ, ಮಂಜುನಾಥ ಸ್ವಾಮೀಯ ರೂಪಕ ಎಲ್ಲರನ್ನು ಆಕರ್ಷಿಸಲಿದೆ ಎಂದು ಹಿಂದೂ ಮಹಾಗಣಪತಿಯ ಸಂಸ್ಥಾಪಕ ಅಧ್ಯಕ್ಷ ಜ್ವಲೆ ಹೇಳಿದ್ರು.

ಇನ್ನು ನಗರ ತೋಗಟಿವೀರ ಕಲ್ಯಾಣ ಮಂಟಪದಲ್ಲಿ ಹಿಂದು ಯುವಶಕ್ತಿ ವೇದಿಕೆ ಕಾರ್ಯಕರು ನವಿಲುಗರಿ ಗಣಪತನ್ನು ಪ್ರತಿಷ್ಟಾಪನೆ ಮಾಡಿದ್ದಾರೆ….5001 ನವಿಲು ಗರಿಗಳನ್ನು ಬಳಸಿ ಗಣೇಶ ಮೂರ್ತಿಗೆ ಅಲಂಕಾರ ಮಾಡಿದ್ದಾರೆ. ಸುಮಾರು 13 ಅಡಿ ಎತ್ತರ ಗಣೇಶ ಎಲ್ಲರನ್ನು ಆಕರ್ಷಿಸುತ್ತಿದೆ. ಕಳೆದ ಬಾರೀ 13 ಸಾವಿರ ಇಷ್ಟಲಿಂಗಗಳನ್ನು ಬಳಸಿ ಗಣೇಶ ಮೂರ್ತಿಯನ್ನು ಪ್ರತಿಷ್ಟಿಸಿದ್ದು ಈ ಬಾರೀ ವಿಶೇಷವಾಗಿ ನವಿಲುಗರಿ ಬಳಸಿ ಗಣೇಶ ಮೂರ್ತಿ ನಿರ್ಮಿಸಿದ್ದಾರೆ.

ಇನ್ನು ವಿನೋಬನಗರದಲ್ಲಿ ಹಿಂದೂ ಮುಸ್ಲೀಂ ಭಾವೈಕ್ಯತೆ ಸಾರುವ ರೀತಿ ಹಿಂದೂ ಮುಸ್ಲೀಂ ಬಾಂಧವರು ಗಣೇಶ ಮೂರ್ತಿಯ ಮುಂದೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ನಗರ ವಿವಿಧೆಡೆ ವಿಜ್ಞ ನಿವಾರಕನ ವಿವಿಧ ಬಗೆಯ ಮೂರ್ತಿಗಳನ್ನು ಪ್ರತಿಷ್ಟಾಪಿಸಲಾಗಿದೆ. ಏನೇ ಆಗಲಿ ಗಣೇಶ ಚಚುರ್ಥಿಯಂದು ಎಲ್ಲರ ವಿಜ್ಞಗಳು ದೂರವಾಗಲಿ ಗಣೇಶ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂಬುದು ನಮ್ಮ ಆಶಯ.

{ ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ:9844460336, 7483892205 }

Continue Reading
Advertisement
You may also like...

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in Home

To Top