ಡಿವಿಜಿ ಸುದ್ದಿ, ದಾವಣಗೆರೆ: ಕನ್ನಡಿಗರ ಬದುಕಿನಲ್ಲಿ, ಭಾವನೆಯಲ್ಲಿ ಬೆರೆತಿರುವ, ಜನರ ಉಸಿರಾಗಿರುವ ನಾಡು-ನುಡಿ ಸರ್ವಾಂಗೀಣ ಅಭಿವೃದ್ದಿಗೆ ನಾವೆಲ್ಲರು ಶ್ರಮಿಸಬೇಕಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಕರೆ ನೀಡಿದರು.
ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದದರು.
ಕನ್ನಡ ಭಾಷೆಯನ್ನು ಬೆಳೆಸಬೇಕಾದರೆ ಅದರ ಮಹತ್ವವನ್ನು ಶಾಲಾ-ಕಾಲೇಜು ಮಕ್ಕಳಿಗೆ ತಿಳಿಸಿಕೊಡಬೇಕು. ಪುಸ್ತಕ ಓದುವ, ಚರ್ಚಿಸುವ, ವಿಮರ್ಶಿಸುವ ಕೆಲಸಕ್ಕೆ ತೊಡಗಿಸಬೇಕು. ಕನ್ನಡದಲ್ಲಿ ಮಾತನಾಡುವುದರಿಂದ ಆಗುವ ಲಾಭಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಭಾಷೆಯ ಅನುಭವದಿಂದ ವ್ಯಕ್ತಿತ್ವ ವಿಕಾಸನ, ಬೌದ್ದಿಕ ಬೆಳವಣಿಗೆ ಸಾಧ್ಯ. ಇದಕ್ಕೆ ಪೋಷಕರು ಅವಕಾಶ ಕಲ್ಪಿಸಬೇಕು. ಕನ್ನಡಿಗರು ಫಲವತ್ತಾದ ಕನ್ನಡ ನೆಲದಲ್ಲಿ ಆಳಕ್ಕೆ ಬೇರೂರಿ, ಹೆಮ್ಮರವಾಗಿ ಬೆಳೆಯಬೇಕು. ನಮ್ಮ ತಾಯ್ನುಡಿಯ ಬಗ್ಗೆ ನಿರಭಿಮಾನ, ದುರಭಿಮಾನ ಹೊಂದದೇ ಸದಭಿಮಾನ ರೂಢಿಸಿಕೊಂಡಾಗ ಮಾತ್ರ ರಾಜ್ಯೋತ್ಸವ ಆಚರಣೆ ಅರ್ಥಪೂರ್ಣ.
ಆಂಗ್ಲ ಭಾಷೆ ನಮಗೆ ಬೇಕು. ಆದರೆ ನಮ್ಮ ಭಾಷೆಯ ಬದಲಿಗೆ ಅಲ್ಲ. ಆಂಗ್ಲಭಾಷೆಯ ವ್ಯಾಮೋಹದ ಸೆಳೆತಕ್ಕೆ ಸಿಲುಕಿ ನಾವು ನಮ್ಮ ಸಂಸ್ಕೃತಿಯನ್ನು ನಾಶಗೊಳಿಸಿಕೊಳ್ಳುತ್ತಿದ್ದೇವೆ. ಕನ್ನಡ ಭಾಷೆಗೆ ಬಂದೊದಗಿದ ಸಾಂಸ್ಕೃತಿಕ ದುಸ್ಥಿತಿಯನ್ನು ನಾವು ಬದಲಿಸಬೇಕಿದೆ. ಕನ್ನಡಿಗಾರದ ನಾವು ಅನ್ಯಭಾಷೆಗಳನ್ನು ಕಲಿಯುತ್ತಾ ಕನ್ನಡ ಭಾಷೆಯನ್ನು ಪ್ರೀತಿಸಿ ಪ್ರೋತ್ಸಾಹಿಸಬೇಕು. ಕನ್ನಡ ಭಾಷೆ ಉಳಿವಿಗಾಗಿ ಇಡೀ ಜೀನವ ಪೂರ್ಣ ಶ್ರಮಿಸಿದ ಸಾಧಕರರನ್ನು ನೆನೆಯಬೇಕಿದೆ ಎಂದರು.
ಗೌರವ ರಕ್ಷೆ ಕಾರ್ಯಕ್ರಮದ ನಂತರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಇವರ ಮಾರ್ಗದರ್ಶನದಲ್ಲಿ ಶಿಸ್ತುಬದ್ಧ ಪಥಸಂಚಲನ ನಡೆಯಿತು. ಕಾರ್ಯಕ್ರಮದಲ್ಲಿ ಡೊಳ್ಳುಕುಣಿತ, ಗಾರುಡಿ ಗೊಂಬೆ, ವೀರಗಾಸೆ, ಕರಡಿ ಮಜಲು ಮತ್ತು ಕಹಳೆ ವಾದನ ಕಲಾತಂಡದವರು ಹಾಗೂ ಕನ್ನಡ ತಾಯಿ ಭುವನೇಶ್ವರಿ ಸ್ತಬ್ಧಚಿತ್ರ ಪ್ರದರ್ಶನ ನಡೆಸಲಾಯಿತು.
ತರಳಬಾಳು ಶಾಲೆ, ಗೋಲ್ಡನ್ ಪಬ್ಲಿಕ್ ಸ್ಕೂಲ್ ಹಾಗೂ ಸೂಪ್ರೊಸೈನ್ ಕಾನ್ವೆಂಟ್‌ನ ಮಕ್ಕಳು ಕನ್ನಡ ನಾಡು-ನುಡಿಗಾಗಿ ಹೋರಾಟ ಮಾಡಿದ, ಕನ್ನಡದ ಕಂಪನ್ನು ಸಾರುವ ವಿವಿಧ ಕನ್ನಡ ಚಿತ್ರಗೀತೆಗಳಾದ ಕರ್ನಾಟಕದ ಇತಿಹಾಸದಲ್ಲಿ.., ಕನ್ನಡವೇ ನಮ್ಮಮ್ಮ.., ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು.., ನನ್ನ ಮಣ್ಣಿದು.., ಜೋಗದ ಸಿರಿ ಬೆಳಕಿನಲ್ಲಿ.. ಸೇರಿದಂತೆ ಹಲವಾರು ಗೀತೆಗಳಿಗೆ ಅರ್ಥಪೂರ್ಣವಾಗಿ ಮತ್ತು ಮನಮೋಹಕವಾಗಿ ನೃತ್ಯ ಮಾಡಿದರು.
ಪಥ ಸಂಚನದಲ್ಲಿ ಗೃಹ ರಕ್ಷಕ ದಳ ಪ್ರಥಮ ಸ್ಥಾನ, ಅಬಕಾರಿ ಇಲಾಖೆ ದ್ವಿತೀಯ ಸ್ಥಾನ ಪಡೆದುಕೊಂಡವು. ಎನ್‌ಸಿಸಿ ವಿಭಾಗದಲ್ಲಿ ಸೇಂಟ್ ಪಾಲ್ಸ್ ಪ್ರೌಢಶಾಲೆ ಪ್ರಥಮ ಸ್ಥಾನ, ಮೋತಿವೀರಪ್ಪ ಪ್ರೌಢಶಾಲೆ ದ್ವಿತೀಯ, ಪ್ರೌಢಶಾಲಾ ವಿಭಾಗದಲ್ಲಿ ಎಸ್‌ಟಿಜೆ ಸ್ಟೆÃಟ್ ಟ್ರೂಪ್ ಪ್ರಥಮ, ಆರ್‌ಎಂಎಸ್‌ಎ ಪ್ರೌಢಶಾಲೆ ದ್ವಿತೀಯ, ಜಿಲ್ಲಾ ಸ್ಕೌಟ್ ತಂಡ ಆರ್‌ವಿಜಿಕೆ ಮತ್ತು ಸಿದ್ದಗಂಗಾ ಪ್ರೌಢಶಾಲೆ ತೃತೀಯ ಸ್ಥಾನ ಪಡೆದುಕೊಂಡವು. ಸಮವಸ್ತç ವಿಭಾಗದಲ್ಲಿ ಎಸ್‌ಟಿಜೆ ಬಾಯ್ಸ್ ತಂಡ ಪ್ರಥಮ, ಜೈನ್ ಪಬ್ಲಿಕ್ ಶಾಲೆ ದ್ವಿತೀಯ, ಸರ್ಟಿಫೈಡ್ ಶಾಲೆ ತೃತೀಯ ಸ್ಥಾನ ಪಡೆದುಕೊಂಡವು.
ಬೆಳಿಗ್ಗೆ ೮.೩೦ ಕ್ಕೆ ನಗರದ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ಇಲ್ಲಿಂದ ಮಹಾನಗರಪಾಲಿಕೆ ಮುಂಭಾಗ, ಗಾಂಧಿ ವೃತ್ತ, ಅಶೋಕ ರಸ್ತೆ, ಜಯದೇವ ವೃತ್ತ, ವಿದ್ಯಾರ್ಥಿ ಭವನದ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದವರೆಗೆ ಕಲಾತಂಡದೊಂದಿಗೆ ಮೆರವಣಿಗೆ ನಡೆಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪದ್ಮಾ ಬಸವಂತಪ್ಪ, ಪ್ರಭಾರ ಅಪರ