ಡಿವಿಜಿ ಸುದ್ದಿ. ಕಾಂ ದಾವಣಗೆರೆ: ಮಂಡಿಪೇಟೆಯ ಕೋದಂಡರಾಮ ದೇವಸ್ಥಾನದ ಸ್ವಸ್ತಿಕ್ ಗ್ರೂಪ್‌ನ ೪೬ನೇ ವರ್ಷದ ಗಣೇಶ ಪ್ರತಿಪ್ಟಾಪನೆ ಹಿನ್ನೆಲೆ ಪೌರಾಣಿಕ ಕಥೆ ಆಧಾರಿತ 3ಡಿ ವರ್ಟಿಕಲ್ ಶೋ ಆಯೋಜಿಸಿದೆ.
ಈ ಬಗ್ಗೆ ಪತ್ರಿಕಾಗೋಷ್ಟಿ ನಡೆಸಿದ ಸ್ವಸ್ತಿಕ್ ಗ್ರೂಪ್ ಸದಸ್ಯ ಪ್ರವೀಣ್, ೩ ಡಿ ವರ್ಟಿಕಲ್ ಹೊಲೊಗ್ರಾಂ ಷೋ ನಲ್ಲಿ ಆಂಜನೇಯ ಸ್ವಾಮೀಯ ಲಂಕಾ ದಹನ, ಕಾರ್ಟುನ್, ರಾಜ್ಯದ ಐತಿಹಾಸಿಕ ಸ್ಮಾರಕಗಳು, ಪರಿಸರನಾಶಕ ದುಷ್ಪರಿಣಾಮಗಳ ದೃಶ್ಯವಳಿಗಳನ್ನು ಪ್ರದರ್ಶಿಸಲಾಗುವುದು. ಸೆ.೧೨ ರವರೆಗೆ ಪ್ರತಿ ದಿನ ಸಂಜೆ ೫.೩೦ ರಿಂದ ೧೦.೩೦ ರವರೆಗೆ ಪ್ರದರ್ಶನವಿರುತ್ತದೆ. ಶಾಲಾ ಮಕ್ಕಳಿಗೆ ವಿಶೇಷವಾಗಿ ಮಧ್ಯಾಹ್ನ ೧೨ ರಿಂದ ೨ ಗಂಟೆ ವರೆಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರೂಪ್ ಸದಸ್ಯರಾದ ಮಹೇಶ್, ಮಂಜುನಥ್ ಶೆಟ್ಟಿ, ಶಿವರಾಮ್ ಶೆಟ್ಟಿ, ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗಾಗಿ ಆದಿತ್ಯ, ೯೭೪೨೧೫೮೫೫೫, ವಿನಯ್ ೯೮೮೦೬೬೩೦೩೨ ಸಂಪರ್ಕಿಸಿ.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: ೯೮೪೪೪೬೦೩೩೬, ೭೪೮೩೮೯೨೨೦೫