ಡಿವಿಜಿ ಸುದ್ದಿ, ದಾವಣಗೆರೆ: ಗುತ್ತಿಗೆ ನೌಕರರನ್ನು ವಜಾಗೊಳಿಸಿರುವುದನ್ನು ಖಂಡಿಸಿ ಪೂಜ್ಯಾಯ ಸೆಕ್ಯೂರಿಟಿ ಏಜೆನ್ಸಿಯ ವಿರುದ್ಧ ಅ. 23 ರಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಿರಂತರ ಅನಿರ್ಧಿಷ್ಟ ಅವಧಿಯವರೆಗೆ ಧರಣಿ ನಡೆಸಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಹೆಚ್. ಮಲ್ಲೇಶ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 20 ದಿನದಿಂದ ಗುತ್ತಿಗೆ ನೌಕರ ವಜಾ ಖಂಡಿಸಿ ನಿರಂತರ ಹೋರಾಟ ಮಾಡುತ್ತಾ ಬಂದ್ದಿದ್ದೇವೆ. ಆದರೆ ಜಿಲ್ಲಾಧಿಕಾರಿಗಳಾಗಿ, ಸಿಜಿ ಆಸ್ಪತ್ರೆಯ ಅಧೀಕ್ಷಕರಾಗಲಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸಲಿದ್ದೇವೆ ಎಂದರು.
ಅನೇಕ ವರ್ಷದಿಂದ ದಿನಗೂಲಿ ಕಾರ್ಯ ನಿರ್ವಹಿಸುತ್ತಿರುವ ನೌಕರಿಗೆ ಕಿರುಕುಳಗಳನ್ನು ನೀಡುತ್ತಾ ಬಂದಿದ್ದು, ಕೆಲವರು ಆತ್ಮಹತ್ಯೆಗೂ ಕೂಡ ಪ್ರಯತ್ನಿಸಿದ್ದಾರೆ. ಏಜೆನ್ಸಿಯ ವ್ಯವಸ್ಥಾಪಕ ಎಂದು ಹೇಳಿಕೊಳ್ಳುವ ಎನ್. ರಾಜ್ ಕುಮಾರ್ ಜಿಲ್ಲಾಸ್ಪತ್ರೆ ನೌಕರರ ಹಾಜರಾತಿಯಲ್ಲಿ ಡಿ ಗ್ರೂಪ್ ನೌಕರರು ಎಂದು ಸರ್ಕಾರದಿಂದ ವೇತನ ಪಡೆದಿದ್ದಾರೆ.ಇಲ್ಲದೆ, ಅವರ ಸಂಬಂಧಿಕರ ಹೆಸರುಗಳನ್ನು ಹಾಜರಾತಿಯಲ್ಲಿ ನಮೂದಿಸಿ ವೇತನ ಪಡೆದಿದ್ದಾರೆ ಎಂದು ದೂರಿದರು.
ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು.ಏಜೆನ್ಸಿಯನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ನೌಕರುಗಳಿಗೆ ಕೆಲಸದ ಭರವಸೆ ನೀಡಬೇಕು. ಇಲ್ಲವಾದಲ್ಲಿ ದಯಾಮರಣಕ್ಕೆ ಅವಕಾಶ ನೀಡಬೇಕು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಡಿ.ಹನುಮಂತಪ್ಪ, ವೆಂಕಟೇಶ್ ಬಾಬು, ಮಲ್ಲಿಕಾರ್ಜುನ್, ಸುರೇಂದ್ರ, ಕರಿಬಸಪ್ಪ ಮತ್ತಿತರರಿದ್ದರು.



