ಡಿವಿಜಿಸುದ್ದಿ ಕಾಂ, ದಾವಣಗೆರೆ: ರಾಜ್ಯ ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ನಡೆದ ಶಿಕ್ಷಣ ಗುಣಮಟ್ಟದ ಮೌಲ್ಯ ಪ್ರಮಾಣೀಕರಣದಲ್ಲಿ ದಾವಣಗೆರೆ ವಿಶ್ವ ವಿದ್ಯಾಲಯವು ೩ ಸ್ಟಾರ್ ಮನ್ನಣೆ ಗಳಿಸಿದೆ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ೧೧ನೇ ಸ್ಥಾನ ಪಡೆದಿದೆ. ಹೊಸ ವಿಶ್ವವಿದ್ಯಾಲಯಗಳ ಪೈಕಿ ಅತ್ಯುತ್ತಮ ಸಾಧನೆ ಮಾಡಿದ ವಿವಿ ಗೌರವಕ್ಕೂ ಪಾತ್ರವಾಗಿದೆ.
ವಿವಿಯ ಈ ಸಾಧನೆಗೆ ಕಾರಣವಾದ ಭೋದಕ ಮತ್ತು ಬೋಧಕೇತರ ಸಿಬ್ಬಂದಿ, ಆಡಳಿತ ಮಂಡಳಿ, ಸಿಂಡಿಕೇಟ್ ಸದಸ್ಯರಿಗೆ ದಾವಣಗೆರೆ ವಿವಿ ಕುಲಪತಿ ಪ್ರೊ. ವಿ. ಹಲಸೆ, ಕುಲಸಚಿವವ ಪ್ರೊ. ಬಸವರಾಜ ಬಣಕಾರ ಹಾಗೂ ಪ್ರೊ. ಗಾಯತ್ರಿ ದೇವರಾಜ ಅಭಿನಂದನೆ ಸಲ್ಲಿಸಿದ್ದಾರೆ.



