ಡಿವಿಜಿಸುದ್ದಿ.ಕಾಂ, ದಾವಣಗೆರೆ: ಮಹಾನಗರಪಾಲಿಕೆ ವತಿಯಿಂದ ಜಲಶಕ್ತಿ ಅಭಿಯಾನ ಅನುಷ್ಠಾನಗೊಳಿಸುವ ಕಾರ್ಯಕ್ರಮದ ಅಂಗವಾಗಿ ಸೆ.೨೦ ರಂದು ಬೆಳಿಗ್ಗೆ ೭.೩೦ ಗಂಟೆಗೆ ಪಾಲಿಕೆ ಕಚೇರಿಯಿಂದ ಸೈಕಲ್‌ಥಾನ್ ಏರ್ಪಡಿಸಲಾಗಿದೆ.
ಈ ಅಭಿಯಾನದಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಸೈಕಲ್ ಸವಾರರು, ಸಾರ್ವಜನಿಕರು, ನಾಗರಿಕರು: ೭೦೧೯೩೯೪೧೨೯, ೯೯೦೨೯೭೫೭೦೧ ಈ ಮೊಬೈಲ್ ಸಂಖ್ಯೆಗಳಿಗೆ ವಾಟ್ಸ್ ಅಪ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು. ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗಿಯಾಗಿ ಜಲ ಸಂರಕ್ಷಣೆಗೆ ಮುಂದಾಗಬೇಕು ಎಂದು ಮಹಾನಗರ ಪಾಲಿಕೆಯ ಆರೋಗ್ಯ ಶಾಖೆಯ ಸಹಾಯ ನಿರ್ದೇಶಕರು ತಿಳಿಸಿದ್ದಾರೆ.