ವಿಜಿಸುದ್ದಿ.ಕಾಂ ಚನ್ನಗಿರಿ: ಹಿಂದೂ ಏಕತಾ ಗಣಪತಿ ವಿಸರ್ಜನೆ ವೇಳೆ ಪೊಲೀಸರು ಮತ್ತು ಗಣಪತಿ ಸಂಘಟನಾ ಸಮಿತಿ ನಡುವೆ ಮಾತಿನ ಚಕಮಕಿಯಾಗಿ ಟ್ಯಾಕ್ಟರ್‌ನಲ್ಲಿದ್ದ ಗಣೇಶಮೂರ್ತಿ ಪ್ಟಲಿಯಾದ ಘಟನೆ ಚನ್ನಗಿರಿಯಲ್ಲಿ ನಡೆದಿದೆ.

ಗಣೇಶಮೂರ್ತಿ ಟ್ಯಾಕ್ಟರ್ ನಿಂದ ಬೀಳುತ್ತಿದ್ದಂತೆ ಸಂಘಟನೆ ಕಾರ್ಯಕರ್ತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭಾರೀ ಸಂಖ್ಯೆಯಲ್ಲಿ ಸೇರಿದ್ದ ಯುವಕರು ಪೊಲೀಸರ ವಿರುದ್ಧ ಕೂಗಲಾರಂಭಿಸಿದರು. ಇದರಿಂದ ಇಡೀ ಚನ್ನಗಿರಿ ತಾಲ್ಲೂಕಿನಾದ್ಯಂತ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಕೊನೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

ಹಿಂದೂ ಏಕತಾ ಗಣಪತಿ ವಿಸರ್ಜನೆ ವೇಳೆ ಡಿಜೆ ಬಳಕೆಗೆ ಸಂಬಂಧಿಸಿ ಪೊಲೀಸರು ಮತ್ತು ಸಮಿತಿ ಕಾರ್ಯಕರ್ತರ ನಡುವೆ ಒಮ್ಮತ ಮೂಡದ ಹಿನ್ನೆಲೆ ಗಲಾಟೆ ನಡೆದಿದೆ. 6 ಡಿಜೆಗೆ ಬಳಸಲು ಗಣಪತಿ ಸಮಿತಿ ಅನುಮತಿ ಕೇಳಿತ್ತು. ಆದರೆ, ಪೊಲೀಸರು ಡಿಜೆ ಬಳಕೆಗೆ ಅನುಮತಿ ನೀಡದ ಹಿನ್ನೆಲೆ ಸಂಘಟನಕಾರರು ಮೆರವಣಿಗೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಅಲ್ಲಿಗೆ ನಿಲ್ಲಿಸಿ ಬಿಟ್ಟು ಹೋಗಿದರು.

ಆಗ ಪೊಲೀಸರೇ ಗಣೇಶ್ ಮೂರ್ತಿ ವಿಸರ್ಜನೆಗೆ ಹೋದಾಗ ಟ್ಯಾಕ್ಟರ್ ನಿಂದ ಗಣೇಶ್ ಮೂರ್ತಿ ಬಿದ್ದಿದೆ. ಇದರಿಂದ ಆಕ್ರೋಶಶಗೊಂಡ ಕಾರ್ಯಕರ್ತರು ಧಿಕ್ಕಾರ ಕೂಗಿದರು. ದಾವಣಗೆರೆ ಜಿಲ್ಲಾಧಿಕಾರಿ ಬಂದ ನಂತರ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಗಣೇಶ ವಿಸರ್ಜನೆ ಮಾಡಲಾಯಿತು
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 98444603336, 7483892205



