ಡಿವಿಜಿಸುದ್ದಿ.ಕಾಂ, ನವದೆಹಲಿ : ರಾಜ್ಯದ ೧೫ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಫಿಕ್ಸ್ ಆಗಿದ್ದು, ಅಕ್ಟೋಬರ್ ೨೧ಕ್ಕೆ ಚುನಾವಣೆ ನಡೆಯಲಿದೆ. ಚುನಾವಣಾ ಆಯೋಗ ಉಪ ಚುನಾವಣೆಗೆ ದಿನಾಂಕ ಘೋಷಿಸಿದ್ದು, ಅ. ೨೪ಕ್ಕೆ ಫಲಿತಾಂಶ ಹೊರ ಬೀಳಲಿದೆ. ಸಮ್ಮಿಶ್ರ ಬೀಳಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಅನರ್ಹ ಶಾಸಕರಿ ಅರ್ಜಿ ಸುಪ್ರೀಂ ಕೋರ್ಟ್ನಲ್ಲಿ ಇನ್ನು ವಿಚಾರಣೆ ಹಂತದಲ್ಲಿದೆ. ಇದೀಗ ಉಪ ಚುನಾವಣಾ ದಿನಾಂಕ ಘೋಷಣೆಯಿಂದ ಅನರ್ಹ ಶಾಸಕರಿಗೆ ಮತ್ತಷ್ಟು ಒತ್ತಡ ಹೆಚ್ಚಾಗಿದೆ.
ಅನರ್ಹ ೧೭ ಶಾಸಕರ ಪೈಕಿ ಕೇವಲ ೧೫ ಕ್ಷೇತ್ರಗಳಿಗಷ್ಟೇ ಉಪಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಅನರ್ಹ ಶಾಸಕ ಮುನಿರತ್ನ ಪ್ರತಿನಿಧಿಸುತ್ತಿದ್ದ ಆರ್. ಆರ್ ನಗರ ಕ್ಷೇತ್ರ ಹಾಗೂ ಪ್ರತಾಪ್ ಗೌಡ ಪಾಟೀಲ್ ಪ್ರತಿನಿಧಿಸುತ್ತಿದ್ದ ಮಸ್ಕಿ ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದೆಡೆ ಚುನಾವಣೆ ನಡೆಯಲಿದೆ.
ಚುನಾವಣೆಯ ಪ್ರಮುಖ ದಿನಾಂಕಗಳು
ನಾಮಪತ್ರ ಸಲ್ಲಿಕೆ ಅಧಿಸೂಚನೆ – ಸೆಪ್ಟೆಂಬರ್ ೨೩
ನಾಮಪತ್ರ ಸಲ್ಲಿಕೆ ಅಂತ್ಯ – ಸೆಪ್ಟೆಂಬರ್ ೩೦
ನಾಮಪತ್ರ ಪರಿಶೀಲನೆ – ಅಕ್ಟೋಬರ್ ೧
ನಾಮಪತ್ರ ವಾಪಸ್: ಅಕ್ಟೋಬರ್.೩
ಮತದಾನ ಅಕ್ಟೋಬರ್ ೨೧
ಫಲಿತಾಂಶ ಅಕ್ಟೋಬರ್ ೨೪
ಚುನಾವಣೆ ನಡೆಯುವ ಕ್ಷೇತ್ರಗಳು
* ಗೋಕಾಕ್
* ಅಥಣಿ
* ರಾಣೆಬೆನ್ನೂರು
* ಕಾಗವಾಡ
* ಹಿರೇಕೆರೂರು
* ಯಲ್ಲಾಪುರ
* ಯಶವಂತಪುರ
* ವಿಜಯನಗರ
* ಶಿವಾಜಿನಗರ
* ಹೊಸಕೋಟೆ
* ಹೊಸಕೋಟೆ
* ಹುಣಸೂರು
* ಕೆ.ಆರ್.ಪೇಟೆ
* ಕೆ.ಆರ್.ಪುರಂ
* ಮಹಾಲಕ್ಷ್ಮೀ ಲೇಔಟ್
* ಚಿಕ್ಕಬಳ್ಳಾಪುರ