ದಾವಣಗೆರೆ: ಮಧ್ಯ ಕರ್ನಾಟಕದ ದಾವಣಗೆರೆ ಹುಡುಗರು ಯಾವುದಕ್ಕೂ ಕಮ್ಮಿ ಇಲ್ಲಅನ್ನೋದು ಸಾಬೀತಾಗಿದೆ. ಯೆಸ್.., ಬೆಣ್ಣೆನಗರಿ ದಾವಣಗೆರೆಯ ಬ್ಲ್ಯಾಕ್ ಕ್ಯಾಟ್ ನಿರ್ಮಿಸಿರುವ ನೀನೇನೆ ಆಲ್ಬಂಬ್ ಸಾಂಗ್ ಯುಟ್ಯೂಬ್‌ನಲ್ಲಿ ಸಖತ್ ಫೇಮಸ್ ಆಗಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಎಬ್ಬಿಸಿದೆ. ಲವ್ ಪ್ರಿಯರಿಯಿಗಂತೂ ಹೇಳಿ ಮಾಡಿಸಿದಂತೆ ಸಾಂಗ್ ಮೇಕಿಂಗ್ ಆಗಿದ್ದು, ಪ್ರತಿಯೊಬ್ಬ ಲವರ್ ನೋಡಲೇ ಬೇಕಾದ ಸಾಂಗ್. ತನ್ನ ಟೀಸರ್ ನಿಂದಲೇ ಸ್ಯಾಂಡಲ್‌ವುಡ್ ನಲ್ಲಿ ಸಖತ್ ಸೌಂಡ್ ಮಾಡಿದ್ದ ಈ ಸಾಂಗ್, ಇದೀಗ ಬ್ಲ್ಯಾಕ್ ಕ್ಯಾಟ್ ಯುಟ್ಯೂಬ್ ಚಾನಲ್ ನಲ್ಲಿ ಲಾಂಚ್ ಆಗಿದೆ. ಯುಟ್ಯೂಬ್‌ನಲ್ಲಿ ಲಾಂಚ್ ಆದ 5 ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ವೀಕ್ಷಕರು ನೋಡಿದ್ದಾರೆ. ನೀನೇನೆ ಸಾಂಗ್ ಮೇಕಿಂಗ್ ನೋಡಿದ ಸ್ಯಾಂಡಲ್ ವುಡ್‌ನ ನಟರಾದ ಉಪೇಂದ್ರ, ಧಿಗಂತ್, ಧನಂಜಯ್ಯ ಸೇರಿದಂತೆ ಅನೇಕ ನಟ-ನಟಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನು ಕೊನೆಯಲ್ಲಿ `ನೊಂದ ಪ್ರೇಮಿಯ ಬೆಂದ ಪಿಸುಮಾತಿನ ಅರ್ಥ ತಿಳಿಯೋದು ಇನ್ನೊಬ್ಬ ನಿಜವಾದ ಪ್ರೇಮಿಗೆ ಮಾತ್ರ’ ಅನ್ನೋ ಟ್ಯಾಗ್ ಲೈನ್ ಸಖತ್ ಕ್ಯಾಚಿಯಾಗಿದೆ. ಇನ್ನು ಸಾಂಗ್ ಮೇಕಿಂಗ್, ಕ್ಯಾಮರಾ ವರ್ಕ್, ಎಡಿಟಿಂಗ್, ಲಿರಿಕ್ಸ್, ಗ್ರಾಫಿಕ್ ಡಿಸೈನ್ ಅದ್ಭುತವಾಗಿ ಮೂಡಿ ಬಂದಿದೆ. ನಿಮಗೂ ಕೂಡ ಲವ್ ಬ್ರೇಕಪ್ ಅನುಭವ ಆಗಿದ್ದರೆ ಈ ಸಾಂಗ್ ನೋಡಿ..…
ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಸೃಷ್ಟಿಸಿದ ನೀನೇನೆ..
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ...
Editor: munikondajji, MA journalism, contact number:7483892205, e-mail: dvgsuddi@gmail.com
Leave a Comment