ಡಿವಿಜಿಸುದ್ದಿ.ಕಾಂ, ಚನ್ನಗಿರಿ: ವಿದ್ಯಾರ್ಥಿಗಳು ಯಶಸ್ಸು ಕಾಣಬೇಕಾದರೆ, ಸತತ ಪ್ರಯತ್ನ ಮುಖ್ಯವೆಂದು ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಪಕ ವೆಂಕಟೇಶ್ ಬಾಬು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬಸವಪಟ್ಟಣದ ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಮರ್ಸ್ ಮತ್ತು ಮ್ಯಾನೇಜ್ಮೆಂಟ್ ಫೆಸ್ಟ್ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಯಾವುದಾದರು ಸಾಧನೆ ಮಾಡಬೇಕಾದರೆ ನಿರಂತರ ಪ್ರಯತ್ನ, ಶ್ರದ್ಧೆ ಅತಿ ಅವಶ್ಯಕ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಮಲ್ಲಯ್ಯ ಎನ್ ಅವರು ವಿದ್ಯಾರ್ಥಿಗಳಲ್ಲಿ ಜೀವನೂತ್ಸಾಹ ತುಂಬುವ ಮಾತನಾಡಿದರು. ಕಾಮರ್ಸ್ ಫೆಸ್ಸ್ ನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಫರ್ಧೆಗಳನ್ನು ಆಯೋಜಿಸಲಾಗಿತ್ತು. ವಿಭಾಗ 150ಕ್ಕೂ ಹೆಚ್ಚು ವಿದ್ಯಾಥಿಘಳು ಭಾಗಿಯಾಗಿದ್ದರು. ಕಾರ್ಯಕ್ರಮವನ್ನು ಬಿಕಾಂ ವಿದ್ಯಾರ್ಥಿ ವಿದ್ಯಾ ನಿರೂಪಿಸಿದರು. ಉಪನ್ಯಾಸಕ ಆಕಾಶ್ ವಂದಿಸಿದರು.




