Connect with us

Dvgsuddi Kannada | online news portal | Kannada news online

ಅಂಕಣ: ಜಾಗತಿಕ ತಾಪಮಾನ ಏರಿಕೆ, ಮುಂದಿವೆ ಸಂಕಷ್ಟದ ದಿನಗಳು….      

ಅಂಕಣ

ಅಂಕಣ: ಜಾಗತಿಕ ತಾಪಮಾನ ಏರಿಕೆ, ಮುಂದಿವೆ ಸಂಕಷ್ಟದ ದಿನಗಳು….      

ಸಕಲ ಜೀವ ರಾಶಿಯಲ್ಲಿ ನಾನೇ ಬುದ್ಧಿವಂತ ಎಂದುಕೊಂಡಿರುವ ಮನುಷ್ಯ.. ತನ್ನ ಅತಿ ಬುದ್ಧಿವಂತಿಕೆಯಿಂದ ತನ್ನ ಕಾಲಿನ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವ ಕೆಲಸಕ್ಕೆ ಕೈ ಹಾಕಿದ್ದಾನೆ.  ಜಾಗತಿಕರಣದ ಪರಿಣಾಮವಾಗಿ ದಿನಂಪ್ರತಿ ಮಾನವ ಪರಿಸರ ನಾಶಕ್ಕೆ ಕಾರಣವಾಗುತ್ತಿದ್ದಾನೆ. ಇದರ ಪರಿಣಾಮವೇ ಜಾಗತಿಕ ತಾಪಮಾನದಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದೆ..

ಈ ಜಾಗತಿಕ ತಾಪಮಾನ ಎಲ್ಲೋ ಏರಿಕೆ ಆಗುತ್ತೆ…. ಯಾರಿಗೂ ಸಮಸ್ಯೆ ಆಗುತ್ತೆ.. ಅದಕ್ಕೆಲ್ಲ ನಾವೇಕೆ ಯೋಚನೆ ಮಾಡಬೇಕು ಅಂದುಕೊಳ್ಳಬೇಡಿ… ಮನುಷ್ಯ ಸೃಷ್ಠಿಸದ ಕಂಪ್ಯೂಟರ್ ನಾವು ತುಂಬಿದ ದತ್ತಾಂಶಗಳನ್ನು ಮಾತ್ರ ಹೇಳಬಲ್ಲದು. ಆದರೆ, ಇಡೀ ಜೀವ ಕುಲವನ್ನೇ ಸೃಷ್ಟಿಸಿದ ಪ್ರಕೃತಿಗೆ ಎಲ್ಲಿ ಏನು ಆಗುತ್ತಿದೆ  ಅನ್ನೋ ಸಾಮಾನ್ಯ ಜ್ಞಾನ ಇಲ್ಲ ಅನ್ನೋದಕ್ಕೆ ಆಗಲ್ಲ. ಪ್ರಕೃತಿ ತನಗೆ ಅವಕಾಶ ಸಿಕ್ಕಾಗೆಲ್ಲ ಮಾನವನಿಗೆ ಬಿಸಿ ಮುಟ್ಟಿಸುತ್ತಾಲೇ ಬಂದಿದೆ…

ಜಲಪ್ರಳಯ, ಚಂಡಮಾರುತ,  ಭೂಕಂಪ ಹೀಗೆ…. ಅನೇಕ ಬಗೆಯಲ್ಲಿ ಪ್ರಕೃತಿ ತನ್ನ ಮುನಿಸು ತೋರಿಸುತ್ತಾ ಬಂದಿದೆ. ಅಷ್ಟಕ್ಕೂ ಈ ಪರಿಸರ ನಾಶಕ್ಕೆ  ಕಾರಣಕತ೯ರು ಯಾರು ಎಂದು ಹುಡುಕುವ ಅಗತ್ಯವಿಲ್ಲ. ನಾವೇ ನಮ್ಮ ಸುತ್ತಮುತ್ತ ದಿನಂಪ್ರತಿ ಒಂದಿಲ್ಲೊಂದು ರೀತಿಯಲ್ಲಿ ಪರಿಸರ ನಾಶಕ್ಕೆ ಕಾರಣಿಕರ್ತರಾಗುತ್ತಿದ್ದೇವೆ.

ನಾವುಗಳು ಪ್ರಕೃತಿ ವಿರುದ್ಧ ಹೋಗುತ್ತಿದ್ದೇವೆ.. ಅದು ನಮ್ಮ ವಿರುದ್ಧ ಬರುತ್ತದೆ. ಮಾನವನ ಬದುಕಿಗೆ ಪ್ರಕೃತಿ ಸಾಕಷ್ಟು ಕೊಟ್ಟಿದೆ. ಆದರೆ, ನಾವುಗಳು ಪ್ರಕೃತಿಯಲ್ಲಿರುವ ಮರಗಳನ್ನು ಕಡಿದು ಅಭಿವೃದ್ದಿಯ ನೆಪದಲ್ಲಿ ಅರಣ್ಯವನ್ನು ನಾಶ ಮಾಡಿದ್ದೆವೆ….

ಇದರ ಜೊತೆಗೆ ದಿನದಿಂದ ದಿನಕ್ಕೆ ವಾಹನದ ಸಂಖ್ಯೆ ಜಾಸ್ತಿಯಾಗುತ್ತಾಲೇ ಇದೆ. ಇದರಿಂದಲೂ ಜಾಗತಿಕ ತಾಪಮಾನ ಜಾಸ್ತಿಯಾಗುತ್ತದೆ. ಪ್ರಕೃತಿ ವಿಕೋಪಕ್ಕೆ ಹೋಗಿ ಅತಿವೃಷ್ಠಿ,ಅನಾವೃಷ್ಠಿಗಳು ಸಂಭವಿಸುತ್ತಿವೆ.. ಪರಿಸರ ನಾಶದಿಂದ ಜಾಗತಿಕ ತಾಪಮಾನ ಜಾಸ್ತಿಯಾಗುತ್ತಿದೆ.  ತಾಪಮಾನದಿಂದ ಮಂಜುಗಡ್ಡೆಗಳು ಕರಗಿ ಸಮುದ್ರದ ಮಟ್ಟ ಜಾಸ್ತಿಯಾಗಿ ತೀರಗಳು ಮುಳುಗಬಹುದು…

ಪ್ರಪಂಚದಲ್ಲಿ 25 ರಷ್ಟು ಮಾತ್ರ ಭಾಗ ಭೂಮಿ ಇದೆ. ಅದಕ್ಕಿಂತ ಜಾಸ್ತಿಯಾಗಿ ನಿಗ೯ಲ್ಲು ಬಂಡೆಗಳಿವೆ. ಅವುಗಳೆಲ್ಲ ಕರಗಿದರೆ ಪ್ರಪಂಚ ವಿನಾಶ ಖಂಡಿತ. ಇನ್ನಾದರೂ ಮನು ಕುಲ ಎಚ್ಚೆತ್ತುಕೊಂಡು ಪರಿಸರ ನಾಶ ಮಾಡದೆ ಉಳಿಸುವತ್ತ ಗಮನಹರಿಸಲಿ.

ಪಶ್ಚಿಮ ಘಟ್ಟಲ್ಲಿ ಕಿರು ವಿದ್ಯುತ್ ಯೋಜನೆ, ರೆಸಾರ್ಟ್, ಹೆದ್ದಾರಿಗಳು, ಡ್ಯಾಂನಂತಹ ಯೋಜನೆಗಳಿಂದ  ಅರಣ್ಯಗಳು ನಾಶವಾಗುತ್ತಿವೆ. ವಿನಾಶದ ಅಂಚಿಗೆ ಹೋಗುತ್ತಿರುವ ಉಳಿಸಿ ಬೆಳಸಬೇಕಿದೆ. ನಾವು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೊಂದು ದಿನ ಭಾರೀ ಸಂಕಷ್ಟ ಎದುರಿಸುವ ದಿನಗಳು ಬಹಳ ದೂರ ಇಲ್ಲ. ಹೀಗಾಗಿ  ಮನು ಕುಲ ಉಳಿಯಬೇಕೆಂದರೆ ಪರಿಸರ ಕಾಪಾಡುವ ತುರ್ತು ಅಗತ್ಯವಿದೆ.

 

ಕೆ.ತಿ.ಗೋಪಾಲ ಗೌಡ

ಪರಿಸರ ಮತ್ತು ಕನ್ನಡ ಪರ ಹೋರಾಟಗಾರರು

ದಾವಣಗೆರೆ

9448569791

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಡಿಜಿಟಲ್ ಮಾಧ್ಯಮ ಅತೀ ವೇಗವಾಗಿ ಜನರನ್ನು ತಲುಪುವ ನ್ಯೂ ಮೀಡಿಯಾ. ಡಿವಿಜಿಸುದ್ದಿ‌.ಕಾಂ ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. 10 ವರ್ಷದ ಅನುಭವದೊಂದಿಗೆ ಹೊಸತನಕ್ಕೆ ಕೈ ಹಾಕಿದ್ದೇವೆ. ಉಪಯುಕ್ತ ಮಾಹಿತಿ, ಸಲಹೆ, ಸೂಚನೆ ನೀಡುವವರು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಅಂಕಣ

To Top