ಡಿವಿಜಿಸುದ್ದಿ.ಕಾಂ, ದಾವಣಗೆರೆ: ೨೦೧೯-೨೦ ನೇ ಸಾಲಿನಲ್ಲಿ ಸಾವಯವ ಕೃಷಿಗೆ ಉತ್ತೇಜನ ನೀಡುವ ಸಲುವಾಗಿ ಸಾವಯವ ಕೃಷಿ ಮತ್ತು ಶೂನ್ಯ ಬಂಡವಾಳ, ನೈಸರ್ಗಿಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಯೋಜನೆಯಡಿಯಲ್ಲಿ ಆಹಾರ ಘಟಕಗಳ ಸ್ಥಾಪನೆ, ಘಟಕಗಳ ವಿಸ್ತರಣೆ, ಆಧುನೀಕರಣಕ್ಕೆ ಸಂಬಂಧಿಸಿದಂತೆ ಪ್ರಸ್ತಾವನೆಗೆ ಅರ್ಜಿ ಆಹ್ವಾನಿಸಿದೆ.
ರೈತರು, ನವೋದ್ಯೋಮಿಗಳು, ರೈತ ಸಂಘಗಳು, ನೊಂದಾಯಿತ ಸ್ವಸಹಾಯ ಗುಂಪುಗಳು, ರೈತ ಉತ್ಪಾದಕರ ಸಂಸ್ಥೆಗಳು, ಖಾಸಗಿ ಉದ್ದಿಮೆದಾರರು, ಸಾರ್ವಜನಿಕ ವಲಯ ಘಟಕಗಳು ಪ್ರಸ್ತಾವನೆ ಸಲ್ಲಿಸಬಹುದು.
ಸಾವಯವ ಮತ್ತು ನೈಸರ್ಗಿಕ ಕೃಷಿ ಉತ್ಪನ್ನಗಳ ಸಂಸ್ಕರಣೆ ಮೌಲ್ಯವರ್ಧನೆ, ವರ್ಗೀಕರಣ, ಪ್ಯಾಕಿಂಗ್ ಮತ್ತು ಬ್ರ‍್ಯಾಂಡಿಂಗ್ ಘಟಕಗಳಿಗೆ ಪ್ರಸ್ತಾವನೆಯ ಒಟ್ಟು ವೆಚ್ಚದ ಮೇಲೆ ಶೇ.೫೦ ಸಹಾಯಧನ ನೀಡಲಾಗುತ್ತಿದೆ. ಗರಿಷ್ಠ ರೂ. ೧೦ ಲಕ್ಷದಂತೆ ಪ್ರತಿ ಘಟಕಕ್ಕೆ ಸಹಾಯದ ಧನ ಸಿಗಲಿದೆ. ಒಟ್ಟು ಎರಡು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವುದು.
ISI,BIS ಮಾರ್ಕ್ ಹೊಂದಿರುವ ಹಾಗೂ CFTRI, IIMR, ICRISAT, NIFTEM, DFRL ಸಂಸ್ಥೆಗಳ ತಂತ್ರಜ್ಞಾನ ಅಳವಡಿಸಿ ತಯಾರಿಸಲಾದ, ದಿನಾಂಕ: ೦೧.೦೪.೨೦೧೯ ರ ನಂತರ ಖರೀದಿಸಿ ಅಳವಡಿಸಿರುವ ಯಂತ್ರೋಪಕರಣಗಳಿಗೆ ಮಾತ್ರ ಸಹಾಯಧನ ನೀಡಲಾಗುವುದು.ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.
ಹೆಚ್ಚಿನ ಮಾಹಿತಿಗೆ ಸಮೀಪದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಿ. ಪ್ರಸ್ತಾವನೆಗಳನ್ನು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರುಗಳಿಗೆ ಸೆ. ೧೮. ರೊಳಗೆ ಸಲ್ಲಿಸುವಂತೆ ದಾವಣಗೆರೆ ಜಂಟಿ ಕೃಷಿ ನಿರ್ದೇಶಕ ಶರಣಪ್ಪ.ಬಿ.ಮುದಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ, ಜಾಹೀರಾತಿಗಾಗಿ ವಾಟ್ಸ್ ಅಪ್ ಮಾಡಿ: 98444603336, 7483892205



