ಡಿವಿಜಿ ಸುದ್ದಿ, ದಾವಣಗೆರೆ: ನಿನ್ನೆಯಷ್ಟೇ ಬಳ್ಳಾರಿಯಲ್ಲಿ ಕೊರೊನಾದಿಂದ ಸಾವನ್ನಪ್ಪಿದ ಮೃತ ದೇಹಗಳನ್ನು ಅಮಾನವೀಯವಾಗಿ ಗುಂಡಿಗೆ ಎಸೆದು ಭಾರೀ ಸುದ್ದಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನಲ್ಲಿ ಇಂತಹದ್ದೇ ಮತ್ತೊಂದು ಘಟನೆ ನಡೆದಿದೆ.
ಚನ್ನಗಿರಿ ತಾಲೂಕಿನ ಕುಂಬಾರ ಬೀದಿಯ ಮಹಿಳೆ 56 ವರ್ಷದ ಮಹಿಳೆಯೊಬ್ಬರು ಕಳೆದ 17 ರಂದು ಉಸಿರಾಟದ ತೊಂದರೆಯಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಅವರಿಗೆ ಕೊರೊನಾ ಸೋಂಕು ಇರುವುದು ಕೂಡ ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರ ಅಂತ್ಯಸಂಸ್ಕಾರವನ್ನು ಚನ್ನಗಿರಿಯ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ವೀರಶೈವ ರುದ್ರಭೂಮಿಯಲ್ಲಿ ಮಾಡಲಾಗಿತ್ತು.
ಮೃತ ಮಹಿಳೆಯ ಶವಸಂಸ್ಕಾರಕ್ಕೆ ಅಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿ ಅನುಸರಿಸಿದ ಕ್ರಮವನ್ನು ಅಮಾನವೀಯವಾಗಿದೆ. ಜೆಸಿಬಿ ಮೂಲಕ ಮೃತದೇಹವನ್ನು ಎತ್ತಿಕೊಂಡು ಹೋಗಿ ಕಸ ಬಿಸಾಕುವಂತೆ ಬಿಸಾಕಿ ಮಣ್ಣುಮುಚ್ಚಲಾಗಿದೆ. ಈ ಹೀನಾಯ ದೃಶ್ಯ ಇದೀಗ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ವೈರಲ್ ಆಗಿದೆ.

ಮೃತದೇಹವನ್ನು ಶವ ಸಂಸ್ಕಾರ ಮಾಡುವಾಗ ಸಿಪಿಐ ಆರ್ ಆರ್ ಪಾಟೀಲ್, ಹಾಗೂ ತಹಶೀಲ್ದಾರ್ ಪುಟ್ಟರಾಜು ಗೌಡ ಸೇರಿದಂತೆ ತಾಲೂಕು ಮಟ್ಟದ ಆರೋಗ್ಯ ಅಧಿಕಾರಿಗಳು ಕೂಡ ಇದ್ದರು. ಅವರ ಎದುರೇ ಈ ರೀತಿಯಾದ ಹೀನಾ ಕೃತ್ಯ ನಡೆದಿದೆ.
ಸರ್ಕಾರದ ಅದೇಶದಂತೆ, ಕೋವಿಡ್ ನಿಯಮಾವಳಿ ಗಳ ಪ್ರಕಾರವೇ ಶವ ಸಂಸ್ಕಾರ ಮಾಡಲಾಗಿದೆ. ಏನಾದರೂ ಲೋಪ ಕಂಡುಬಂದಿದ್ದರೆ, ಅಂಥವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಸ್ಪಷ್ಟನೆ ನೀಡಿದ್ದಾರೆ.
https://www.facebook.com/permalink.php?story_fbid=272209770872572&id=105586904201527



