ನವದೆಹಲಿ: ಚೀನಾ ಮೂಲದ 59 ಆ್ಯಪ್‌ಗಳನ್ನು ಕೇಂದ್ರ ಸರ್ಕಾರ ನಿಷೇಧ ಹಿನ್ನೆಲೆ ಸರ್ಕಾರದ ಆದೇಶ ಪಾಲಿಸುತ್ತಿರುವುದಾಗಿ ಹೇಳಿರುವ ಟಿಕ್‌ಟಾಕ್ ಹೇಳಿದೆ. ಈ ಬಗ್ಗೆ ಸ್ಪಷ್ಟನೆ ನೀಡಲು ಕೇಂದ್ರ ಸರ್ಕಾರವು ಸಂಬಂಧಪಟ್ಟವರನ್ನು ಭೇಟಿ ಮಾಡುವಂತೆ ಸೂಚನೆ ನೀಡಿದೆ.
ಈ ಕುರಿತು ಇಂದು ಟ್ವೀಟ್ ಮಾಡಿರುವ ಟಿಕ್ ಟಾಕ್ ಈ ವಿಷಯ ಬಹಿರಂಗಪಡಿಸಿದೆ. ಚೀನಾದ 59 ಆ್ಯಪ್‌ಗಳನ್ನು ನಿಷೇಧಿಸಿ ಕೇಂದ್ರ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು. ಅದರಲ್ಲಿ ಪೈಕಿ ಟಿಕ್ ಟಾಕ್ ಕೂಡ ಒಂದು.
ಭಾರತ ಕಾನೂನಿನಂತೆ ಟಿಕ್ ಟಾಕ್ ಎಲ್ಲ ರೀತಿಯ ವೈಯಕ್ತಿಕ ಸುರಕ್ಷತೆ, ವೈಯಕ್ತಿಕ ಮಾಹಿತಿ ಸಂರಕ್ಷಣೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದೆ. ಬಳಕೆದಾರರ ಮಾಹಿತಿಯನ್ನು ಟಿಕ್ ಟಾಕ್ ಯಾವುದೇ ದೇಶದೊಂದಿಗಾಗಲಿ ಹಂಚಿಕೊಂಡಿಲ್ಲ. ಗ್ರಾಹಕರ ವೈಯಕ್ತಿಕ ಮಾಹಿತಿ ಮತ್ತು ಭದ್ರತೆ ವಿಚಾರದಲ್ಲಿ ನಾವು ಪ್ರಾಮುಖ್ಯತೆ ತೋರುತ್ತಿದ್ದೇವೆ ಎಂದು ಹೇಳಿಕೊಂಡಿದೆ.
ಭಾರತೀಯ 14 ಭಾಷೆಗಳಲ್ಲಿಟಿಕ್ ಟಾಕ್ ಲಭ್ಯವಿದ್ದು, ಪ್ರಜಾಸತ್ತಾತ್ಮಕವಾಗಿ ನಡೆದುಕೊಳ್ಳುತ್ತಿದೆ. ನೂರಾರು ಮಿಲಿಯನ್ ಬಳಕೆದಾರರು ತಮ್ಮ ಜೀವನಾಧಾರವಾಗಿ ಟಿಕ್ ಟಾಕ್ ಅನ್ನು ಅವಲಂಬಿಸಿದ್ದಾರೆ ಎಂದು ಟಿಕ್ ಟಾಕ್ ಇಂಡಿಯಾದ ಮುಖ್ಯಸ್ಥ, ನಿಖಿಲ್ ಗಾಂಧಿ ತಿಳಿಸಿದ್ದಾರೆ.
— TikTok India (@TikTok_IN) June 30, 2020



