ನವದೆಹಲಿ: ಲಡಾಖ್ ಗಡಿ ಸಂಘರ್ಷ ನಂತರ ಬ ಚೀನಾ ವಸ್ತುಗಳ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ಇದೀಗ ಟಿಕ್ ಟಾಕ್, ಶೇರ್ ಇಟ್ ಸೇರಿದಂತೆ 59 ಚೀನಾ ಆ್ಯಪ್‌ಗಳಿಗೆ ಕೇಂದ್ರ ಸರ್ಕಾರ ನಿಷೇಧ ಹೇರಿದೆ ಆದೇಶ ಹೊರಡಿಸಿದೆ.

ಭಾರತದ ಸೈಬರ್‌ಸ್ಪೇಸ್ ಸಾರ್ವಭೌಮತ್ವದ ಸುರಕ್ಷತೆಯ ಉದ್ದೇಶದೊಂದಿಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೇಳಿದೆ. ಜೂನ್ 15ರಂದು ಲಡಾಖ್‌ನ ಗಾಲ್ವನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಕರ್ನಲ್ ಶ್ರೇಣಿಯ ಅಧಿಕಾರಿ ಸೇರಿದಂತೆ 20 ಭಾರತೀಯ ಯೋಧರು ಹುತಾತ್ಮರಾಗಿದ್ದರು.
ಇದರಿಂದ ಚೀನಾ ವಿರುದ್ಧ ದೇಶದಲ್ಲಿ ಆಕ್ರೋಶ ಹೆಚ್ಚಾಗಿತ್ತು. ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ದೇಶದಾದ್ಯಂತ ಆಗ್ರಹ ವ್ಯಕ್ತವಾಗಿತ್ತು. ಸಾಮಾಜಿಕ ಜಾಲತಾಣಗಳಲ್ಲಿಯೂ ಅಭಿಯಾನ ನಡೆದಿತ್ತು. ತೀರಾ ಅಗತ್ಯವಿಲ್ಲದ ಚೀನಾ ವಸ್ತುಗಳ ಆಮದು ನಿಷೇಧಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿತ್ತು. ಕೈಗಾರಿಕೋದ್ಯಮಿಗಳ ಅಭಿಪ್ರಾಯವನ್ನೂ ಕೇಳಿತ್ತು. ಚೀನಾದಿಂದ ಆಮದಾಗುವ ಅಗತ್ಯ ವಸ್ತುಗಳ, ಕಚ್ಚಾ ವಸ್ತುಗಳ ಪಟ್ಟಿ ಒದಗಿಸುವಂತೆಯೂ ಅದಕ್ಕೆ ಪರ್ಯಾಯಗಳ ಬಗ್ಗೆ ಸಲಹೆ ನೀಡುವಂತೆಯೂ ಸೂಚಿಸಿತ್ತು.
ನಿಷೇಧವಾಗಿರುವ ಆ್ಯಪ್‌ಗಳು
1) ಟಿಕ್ ಟಾಕ್
2) ಶೇರ್ ಇಟ್
3) ಕ್ವಾಯ್ (Kwai)
4) ಯುಸಿ ಬ್ರೌಸರ್
5) ಬೈಡು
6) ಶೇನ್
7) ಕ್ಲಾಶ್ ಆಫ್ ಕಿಂಗ್ಸ್
8) ಡಿಯು ಬ್ಯಾಟರಿ ಸೇವರ್
9) ಹೆಲೊ
10) ಲೈಕೀ
11) ಯುಕ್ಯಾಮ್ ಮೇಕ್‌ಅಪ್
12) ಎಂಐ ಕಮ್ಯೂನಿಟಿ
13) ಸಿಎಂ ಬ್ರೊವರ್ಸ್
14) ವೈರಸ್ ಕ್ಲೀನರ್
15) ಎಪಿಯುಎಸ್ ಬ್ರೌಸರ್
16) ರೋಮ್‌ವಿ
17) ಕ್ಲಬ್ ಫ್ಯಾಕ್ಟರಿ
18) ನ್ಯೂಸ್ ಡಾಗ್
19) ಬ್ಯೂಟಿ ಪ್ಲಸ್
20) ವಿ ಚಾಟ್
21) ಯುಸಿ ನ್ಯೂಸ್
22) ಕ್ಯುಕ್ಯು ಮೇಲ್
23) ವೆಬಿಯೊ
24) ಕ್ಸೆಂಡರ್
25) ಕ್ಯುಕ್ಯು ಮ್ಯೂಸಿಕ್
26) ಕ್ಯುಕ್ಯು ನ್ಯೂಸ್‌ಫೀಡ್
27) ಬಿಗೊ ಲೈವ್
28) ಸೆಲ್ಫಿ ಸಿಟಿ
29) ಮೇಲ್ ಮಾಸ್ಟರ್
30) ಪ್ಯಾರಲಲ್ ಸ್ಪೇಸ್
31) ವಿಗೊ ವಿಡಿಯೊ
32) ನ್ಯೂ ವಿಡಿಯೊ ಸ್ಟೇಟಸ್
33) ಎಂಐ ವಿಡಿಯೊ ಕಾಲ್ – ಶಿಯಾಮಿ
34) ವಿಸಿಂಕ್
35) ಇಎಸ್ ಫೈಲ್ ಎಕ್ಸ್‌ಪ್ಲೋರರ್
36) ವಿವೊ ವಿಡಿಯೊ – ಕ್ಯುಯು ವಿಡಿಯೊ ಕಂಪನಿ
37) ಮೇಟು (Meitu)
38) ಡಿಯು ರೆಕಾರ್ಡರ್
39) ವಾಲ್ಟ್ – ಹೈಡ್
40) ಕ್ಯಾಷ್ (Cache) ಕ್ಲೀನರ್ ಡಿಯು ಆಪ್ ಸ್ಟುಡಿಯೊ
41) ಡಿಯು ಕ್ಲೀನರ್
42) ಡಿಯು ಬ್ರೌಸರ್
43) ಹಗೊ ಪ್ಲೇ ವಿತ್ ನ್ಯೂ ಫ್ರೆಂಡ್ಸ್
44) ಕ್ಯಾಮ್ ಸ್ಕಾನರ್
45) ಕ್ಲೀನ್ ಮಾಸ್ಟರ್ – ಚೀತಾ ಮೊಬೈಲ್
46) ವಂಡರ್ ಕ್ಯಾಮೆರಾ
47) ಫೋಟೊ ವಂಡರ್
48) ಕ್ಯುಕ್ಯು ಪ್ಲೇಯರ್
49) ವಿ ಮೀಟ್
50) ಸ್ವೀಟ್ ಸೆಲ್ಫಿ
51) ಬೈಡು ಟ್ರಾನ್ಸ್‌ಲೇಟ್
52) ವಿಮೇಟ್
53) ಕ್ಯುಕ್ಯು ಇಂಟರ್‌ನ್ಯಾಷನಲ್
54) ಕ್ಯುಕ್ಯು ಸೆಕ್ಯುರಿಟಿ ಸೆಂಟರ್
55) ಕ್ಯುಕ್ಯು ಲಾಂಚರ್
56) ಯು ವಿಡಿಯೊ
57) ವಿ ಫ್ಲೈ ಸ್ಟೇಟಸ್ ವಿಡಿಯೊ
58) ಮೊಬೈಲ್ ಲೆಜೆಂಡ್ಸ್
59) ಡಿಯು ಪ್ರೈವಸಿ



