ನವದೆಹಲಿ: ದೇಶದಾದ್ಯಂತ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕೋವಿಡ್-19 ಸೋಂಕು, ಒಂದೇ ದಿನದಲ್ಲಿ 19,459 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ವಿವಿಧ ರಾಜ್ಯದಲ್ಲಿ ಒಟ್ಟು ಕೊರೊನಾ 380 ಜನರನ್ನು ಬಲಿ ಪಡೆದಿದೆ.
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ದೇಶದಲ್ಲಿ ಒಟ್ಟು 5,48,318 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, ಮೃತರ ಸಂಖ್ಯೆಯು 16,475ಕ್ಕೆ ಏರಿಕೆಯಾಗಿದೆ. 2,10,120 ಪ್ರಕರಣಗಳು ಸಕ್ರಿಯವಾಗಿದ್ದು, 3,21,723 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ದೇಶದಲ್ಲಿಯೇ ಅತ್ಯಾಧಿಕ ಮಹಾರಾಷ್ಟ್ರದಲ್ಲಿ1,64,626 ಪ್ರಕರಣಗಳು ಬೆಳಕಿಗೆ ಬಂದಿದ್ದು, 7,429 ಜನರು ಮೃತರಾಗಿದ್ದಾರೆ. ಗುಜರಾತ್‌ನಲ್ಲಿ ಒಟ್ಟಾರೆ 31,320 ಜನರಿಗೆ ಸೋಂಕು ತಗುಲಿದೆ. 1,808 ಜನರು ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಒಟ್ಟಾರೆ 83,077 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. 2,623 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ ಒಟ್ಟಾರೆ 82,275 ಮಂದಿಗೆ ಸೋಂಕು ತಗುಲಿದ್ದು, , 1,079 ಮಂದಿ ಮೃತಪಟ್ಟಿದ್ದಾರೆ.ಇನ್ನುಳಿದಂತೆ ಮಧ್ಯಪ್ರದೇಶದಲ್ಲಿ 557, ಪಶ್ಚಿಮ ಬಂಗಾಳದಲ್ಲಿ 639, ಉತ್ತರ ಪ್ರದೇಶದಲ್ಲಿ 660 ಜನರು ಕೊರೊನಾ ವೈರಸ್ ನಿಂದ ಸಾವನ್ನಪ್ಪಿದ್ದಾರೆ.



