ಡಿವಿಜಿ ಸುದ್ದಿ, ದಾವಣಗೆರೆ: ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ ವ್ಯಕ್ತಿ , ಇದೀಗ ಪಿಡಿಒ ಹುದ್ದೆ ಸಿಕ್ಕ ಮೇಲೆ ಕೈ ಕೊಟ್ಟಿರುವುದಾಗಿ ಶಾಮನೂರು ಯುವತಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶಾಮನೂರು ನಿವಾಸಿಯಾದ ಯುವಕ-ಯುವತಿ ಅನೇಕ ವರ್ಷಗಳಿಂದ ಪ್ರೀತಿಸುತ್ತಿದ್ದರು. ಯುವಕ ಪರಮೇಶ್ವರಪ್ಪಗೆ ಅನುಕಂಪದ ಆಧಾರದ
ಪಿಡಿಒ ಹುದ್ದೆ ಸಿಕ್ಕಿದೆ. ಉದ್ಯೋಗ ಸಿಕ್ಕ ನಂತರ ಮದುವೆ ಆಗುವುದಿಲ್ಲ ಎಂದಿದ್ದಾನೆ. ಯುವಕ ಮದುವೆಯಾವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.



