ಡಿವಿಜಿ ಸುದ್ದಿ, ಹರಪನಹಳ್ಳಿ: ತಾಲ್ಲೂಕಿನ ಅರಸೀಕೆರೆ ಪೊಲೀಸ್ ಪೇದೆಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ನಮಗೂ ಕೊರೊನಾ ಟೆಸ್ಟ್ ಮಾಡಿಸಿ ಎಂದು ಅರಸೀಕೆರೆ ಪೊಲೀಸ್ ಕ್ವಾಟ್ರರ್ಸ್ ಸಿಬ್ಬಂದಿಗಳು ಬಳ್ಳಾರಿ ಎಸ್ ಪಿಗೆ ಮನವಿ ಮಾಡಿದ್ದಾರೆ.
ಅರಸೀಕೆರೆ ಪೊಲೀಸ್ ಠಾಣೆಯ ಮುಖ್ಯ ಪೇದೆಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಮಗೂ ಕೊರೊನಾ ಟಿಸ್ಟ್ ಮಾಡಿಸಿ ಎಂದು ಪೊಲೀಸ್ ಕ್ವಾಟ್ರರ್ಸ್ ನಿವಾಸಿಗಳು ಪತ್ರದ ಮೂಲಕ ಎಸ್ ಪಿಗೆ ಮನವಿ ಮಾಡಿದ್ದಾರೆ.
ಪೊಲೀಸ್ ಕ್ವಾಟ್ರರ್ಸ್ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದ್ದು, ನಿವಾಸಿಗಳು ಅಗತ್ಯ ವಸ್ತು, ಕುಡಿಯುವ ನೀರಿಗಾಗಿ ಪರದಾಡುವಂತಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.