ನವದೆಹಲಿ: ದೇಶದಾದ್ಯಂತ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೊನಾ ಸೋಂಕು, 24 ಗಂಟೆಗಳಲ್ಲಿ 19,906 ಸೋಂಕು ಪತ್ತೆಯಾಗಿದೆ. ಇನ್ನು ಸೋಂಕಿನಿಂದ 410 ಜನರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ದೇಶದಲ್ಲಿ ಇದುವರೆಗೆ 5,28,859 ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿದ್ದು, ಮೃತರ ಸಂಖ್ಯೆಯು 16,095ಕ್ಕೆ ಹೆಚ್ಚಾಗಿದೆ. ದೇಶದಾದ್ಯಂತ 2,03,051 ಪ್ರಕರಣಗಳು ಸಕ್ರಿಯವಾಗಿದ್ದು, 3,09,713 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಇಡೀ ದೇಶದಲ್ಲಿಯೇ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚಿನ 1,59,133 ಕೊರೊನಾ ಪ್ರಕರಣಗಳು ಲತ್ತೆಯಾಗಿದ್ದು, ಬಂದಿದ್ದು, 67,615 ಸೋಂಕಿತರಿಗೆ ಚಿಕಿತ್ಸೆ ಮುಂದುವರಿದಿದೆ. ಈವರೆಗೆ 84,245 ಮಂದಿ ಗುಣಮುಖರಾಗಿದ್ದು, 7,273 ಜನರು ಮೃತರಾಗಿದ್ದಾರೆ. ಇನ್ನು ಗುಜರಾತ್ 30,709 , ದೆಹಲಿ 80,188, ತಮಿಳುನಾಡು 78,335 ಮಂದಿಗೆ ಸೋಂಕು ತಗುಲಿದೆ.



