ಡಿವಿಜಿ ಸುದ್ದಿ.ಕಾಂ, ದಾವಣಗೆರೆ: ಮುಂಬರುವ ಉಪಚುನಾವಣೆಯಲ್ಲಿ ಬಿಜೆಪಿ 15 ಕ್ಷೇತ್ರಗಳಲ್ಲಿಯೂ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ದಾವಣಗೆರೆಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಸಂಘಟನೆ ಉತ್ತಮವಾಗಿದ್ದು, ಜನರು ನಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಈಗಾಗಲೇ ೧೫ ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾಗಿದ್ದು, ೧೫ ಕ್ಷೇತ್ರಗಳಲ್ಲಿಯೂ ಬಿಜೆಪಿ ಜಯಭೇರಿ ಆಗಲಿದೆ ಎಂದರು.
ಅನರ್ಹ ಶಾಸಕರ ಬಗ್ಗೆ ಗೌರವಿದ್ದು, ಅವರು ರಾಜಿನಾಮೆ ಕೊಟ್ಟಾಗ ಸ್ಪೀಕರ್ ತೊಘಲಕ್ ದರ್ಬಾರ್ ಮಾಡಿ ಅನರ್ಹ ಗೊಳಿಸಿದ್ದಾರೆ. ಸುಪ್ರೀಕೋರ್ಟ್ ತೀರ್ಮಾನ ಅನರ್ಹ ಶಾಸಕರ ಪರ ಬರುವ ವಿಶ್ವಾಸವಿದೆ.
ಕುಮಾರ್ ಸ್ವಾಮಿ ಲಾಟರಿ ಸಿಎಂ
ದೇವೇಗೌಡರ ಕುಟುಂಬ ರಾಜಕಾರಣ ಮುಗಿದ ಅಧ್ಯಾಯ. ಯಡಿಯೂರಪ್ಪ ಪತ್ನಿ ಸಾವಿನ ಬಗ್ಗೆ ಮಾಜಿ ಸಿಎಂ ಕುಮಾರ್ ಸ್ವಾಮಿ ಮಾತನಾಡಿದ್ದು ಸರಿಯಲ್ಲ. ಇದು ಮೂರ್ಖತನದ ಪರಮಾವಧಿ. ಕುಮಾರ ಸ್ವಾಮಿ ಒಬ್ಬರ ಲಾಟರಿ ಸಿಎಂ ಎಂದು ರೇಣುಕಾಚಾರ್ಯ ವ್ಯಂಗ್ಯವಾಡಿದರು.



