ಡಿವಿಜಿ ಸುದ್ದಿ, ದಾವಣಗೆರೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ಹಿಮಗಿರಿಯ ಗಲ್ವಾನ ಕಣಿವೆಯಲ್ಲಿ ಚೀನಾ ಸೈನಿಕರೊಂದಿಗೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ನಗರದ “ಜಯನಿವಾಸ” ಕಾರ್ಯಾಲಯದಲ್ಲಿ ಕಾರ್ಯಕರ್ತರು ಭಾವಪೂರ್ಣ ನಮನಗಳನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಅಭಾವಿಪ ರಾಜ್ಯ ಕಾರ್ಯದರ್ಶಿ ಪ್ರತೀಕ್ ಮಾಳಿಯವರು ಮಾತನಾಡಿ, ಅಭಾವಿಪ ಕಾರ್ಯಕರ್ತರು ದೇಶಕ್ಕೋಸ್ಕರ ಹೋರಾಡಲು ಸದಾ ಸಿದ್ಧರಾಗಿರಬೇಕು. ದೇಶದ ಯೋಧರೊಂದಿಗೆ ನಾವೆಲ್ಲಾ ನಿಲ್ಲಬೇಕು.ಚೀನಾವು ಕುತಂತ್ರ ಬುದ್ಧಿಯನ್ನು ಬಳಸಿ ಬಾರತದ ದೇಶದ ಏಳ್ಗೆಯನ್ನು ಸಹಿಸಲಾಗದೇ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರಯತ್ನ ಪಡುತ್ತಿದೆ ಎಂದರು.
ವಿಶ್ವಖ್ಯಾತಿ ಪಡೆಯುತ್ತಿರುವ ಭಾರತವನ್ನು ಸಹಿಸದ ಚೀನಾ ಭಾರತದ ಗಡಿಯೊಳಗೆ ಒಳನುಸುಳುವಿಕೆಯನ್ನು ಮತ್ತೆ ಪ್ರಾರಂಭಿಸಿದೆ. ಚೈನಾ ದೇಶದ ಈ ಹೇಡಿತನದಲ್ಲಿ ಹೊಸದೇನೂ ಅಲ್ಲ. ಇಂದಿನ ಚೀನಾ ಬೌದ್ಧಧರ್ಮವನ್ನು ಆಧರಿತ ದೇಶವಲ್ಲ.ಅದು ಕಮ್ಯುನಿಸಮ್ ಆಧಾರಿತ ದೇಶವಾಗಿದೆ. ಪ್ರಾಚೀನಕಾಲದಲ್ಲಿ ಚೀನಾದೊಂದಿಗೆ ಇದ್ದ ಸದಾಚಾರ ಮತ್ತು ನೈತಿಕತೆಯನ್ನು ಭಾರತೀಯರು ಕೈಬಿಟ್ಟಿದ್ದಾರೆ.
ಭಾರತೀಯರಾದ ನಾವು ದೇಶದ ರಕ್ಷಣೆಗೋಸ್ಕರ ಹೋರಾಡಲು ಸದಾ ತಯಾರಾಗಿರಬೇಕು ಮತ್ತು ಚೀನಾದ ವಸ್ತುಗಳನ್ನು ಬಹಿಷ್ಕರಿಸಬೇಕು ಎಂದು ಹೇಳಿದರು.
ಹುತಾತ್ಮರಾದ ವೀರ ಯೋಧರಿಗೊಂದು ಪುಷ್ಪ ನಮನ ಸಲ್ಲಿಸಿ ಹಾಗೂ ಒಂದು ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸಲಾಯಿತು.



