ನವದೆಹಲಿ: ಚೀನಾ ಗಡೆಯಲ್ಲಿ ಮತ್ತೆ ಕಿರಿಕ್ ಶುರು ಮಾಡಿದೆ. ಸೇನಾಪಡೆಗಳೊಂದಿಗೆ ಸೋಮವಾರ ರಾತ್ರಿ ಲಡಾಖ್‌ನ ಪೂರ್ವಭಾಗದ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಭಾರತದ ಸೇನಾಪಡೆಯ ಅಧಿಕಾರಿ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಸಂಘರ್ಷದಲ್ಲಿ ಚೀನಾದ ಸೇನೆಗೂ ಹಾನಿಯಾಗಿದೆ.
ಚೀನಾ-ಭಾರತ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣಗೊಂಡಿದ್ದು, ಪರಿಸ್ಥಿತಿ ತಿಳಿಗೊಳಿಸುವ ಸಲುವಾಗಿ ಉಭಯ ದೇಶಗಳ ಸೇನಾಪಡೆ ಅಧಿಕಾರಿಗಳು ಗಲ್ವಾನ್‌ನಲ್ಲಿ ಸಭೆ ನಡೆಸಿದರು. ಭಾರತ ಮತ್ತು ಚೀನಾದ ಪಡೆಗಳು ಕೆಲವು ವಾರಗಳಿಂದ ಗಲ್ವಾನ್ ಕಣಿವೆಯಲ್ಲಿಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.
ವಿವಾದಿತ ಗಡಿ ಪ್ರದೇಶ ದಾಟಿ ಭಾರತೀಯ ಸೇನೆಯೇ ನಮ್ಮ ಸಿಬ್ಬಂದಿ ಮೇಲೆ ದಾಳಿ ನಡೆಸಿದೆ ಎಂದು ಚೀನಾ ಆರೋಪಿಸಿದೆ. ನಮ್ಮ ಸೇನಾ ಪಡೆಗಳನ್ನು ಪ್ರಚೋದಿಸಿದ್ದಲ್ಲದೆ, ದಾಳಿ ಮಾಡಿದ್ದವು. ಪರಿಣಾಮವಾಗಿ ಚಕಮಕಿ ನಡೆದು ಎರಡೂ ದೇಶಗಳ ಯೋಧರಿಗೆ ಹಾನಿಯಾಗುವಂತಾಯಿತು ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಆರೋಪಿಸಿದ್ದಾರೆ.



