ನವದೆಹಲಿ: ದೇಶದಾದ್ಯಂತ ಒಂದು ದಿನ ಅವಧಿಯಲ್ಲಿ 11,502 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 325 ಜನ ಮೃತಪಟ್ಟಿದ್ದಾರೆ.
ಈ ಬಗ್ಗೆಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ದೇಶದಲ್ಲಿ ಈವರೆಗೆ ಒಟ್ಟು 3,32,424 ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದ್ದು, 9,520 ಜನರು ಮೃತಪಟ್ಟಿದ್ದಾರೆ.
ಸದ್ಯ 1,53,106 ಪ್ರಕರಣಗಳು ಸಕ್ರಿಯವಾಗಿದ್ದು, 1,69,798 ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಮಹಾರಾಷ್ಟ್ರ ಒಂದರಲ್ಲಿಯೇ ಒಟ್ಟು 1,07,958 ಪ್ರಕರಣಗಳು ಬೆಳಕಿಗೆ ಬಂದಿದ್ದು, 3,950 ಜನರು ಮೃತರಾಗಿದ್ದಾರೆ. ಗುಜರಾತ್‌ನಲ್ಲಿ 5,742 ಸಕ್ರಿಯ ಪ್ರಕರಣಗಳಿದ್ದು, 1,477 ಜನರು ಮೃತಪಟ್ಟಿದ್ದಾರೆ. ಒಟ್ಟಾರೆ 23,544 ಜನರಿಗೆ ಸೋಂಕು ತಗುಲಿದೆ. ದೆಹಲಿಯಲ್ಲಿ 41,182 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, 1,327 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 44,661 ಮಂದಿಗೆ ಸೋಂಕು ತಗುಲಿದ್ದು, 19,679 ಸಕ್ರಿಯ ಪ್ರಕರಣಗಳಿವೆ. 435 ಮಂದಿ ಮೃತಪಟ್ಟಿದ್ದಾರೆ.