ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿಂದು 176 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಮೃತಪಟ್ಟಿದ್ದಾರೆ.
ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದ್ದು, ರಾಜ್ಯದಲ್ಲಿ 7,000 ಮಂದಿಗೆ ಸೋಂಕು ತಗುಲಿದ್ದು, 86 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ 3,955 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 2,956 ಸಕ್ರಿಯ ಪ್ರಕರಣಗಳು ರಾಜ್ಯದಲ್ಲಿದ್ದು, 16 ಜನರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇವತ್ತು ಬೆಂಗಳೂರು ನಗರ 42, ಯಾದಗಿರಿ 22, ಉಡುಪಿ 21, ಬೀದರ್ 20, ಕಲಬುರಗಿ 13, ಧಾರವಾಡ 10, ಬಳ್ಳಾರಿ 8, ಕೋಲಾರ 7, ಉತ್ತರ ಕನ್ನಡ 6, ಮಂಡ್ಯ 5, ದಕ್ಷಿಣ ಕನ್ನಡ 5, ಬಾಗಲಕೋಟೆ 4, ರಾಮನಗರ 3, ರಾಯಚೂರು 2, ಶಿವಮೊಗ್ಗ 2, ಬೆಳಗಾವಿ 1 ಮತ್ತು ಹಾಸನ, ವಿಜಯಪುರ, ಬೆಂಗಳೂರು ಗ್ರಾಮಾಂತರ ಮತ್ತು ಹಾವೇರಿಯಲ್ಲಿ ತಲಾ ಒಂದು ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ.



