ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಇಂದು 3 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, 08 ಜನ ಸೋಂಕಿತರು ಗುಣಮುಖರಾಗಿ ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ರೋಗಿ ಸಂಖ್ಯೆ 6039 25 ವರ್ಷದ ಮಹಿಳೆ ಇವರು ಮಹಾರಾಷ್ಟ್ರ ರಾಜ್ಯದಿಂದ ಹಿಂದಿರಾಗಿದ್ದಾರೆ. 39 ವರ್ಷದ ಪುರುಷ ಇವರು ರೋಗಿ ಸಂಖ್ಯೆ-1485 ರ ಸಂಪರ್ಕಿತರಾಗಿದ್ದು, 40 ವರ್ಷದ ಮಹಿಳೆ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
08 ಜನರ ಬಿಡುಗಡೆ : ರೋಗಿ ಸಂಖ್ಯೆ 4083, 4084, 4087, 4088, 4090, 4019, 4092 ಮತ್ತು 3977 ಇವರು ಸಂಪೂರ್ಣರಾಗಿ ಗುಣಮುಖರಾಗಿ ಇಂದು ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಇದುವರೆಗೆ ಒಟ್ಟು 214 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಈ ಪೈಕಿ 165 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಒಟ್ಟು 06 ಸಾವು ಸಂಭವಿಸಿದ್ದು, ಪ್ರಸ್ತುತ 43 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.



