ಡಿವಿಜಿಸುದ್ದಿ.ಕಾಂ,ದಾವಣಗೆರೆ: ಜಲಶಕ್ತಿ ಅಭಿಯಾನ ಕಾರ್ಯಕ್ರಮ ಅನುಷ್ಠಾನಗೊಳಿಸುವುದರ ಅಂಗವಾಗಿ ಮಹಾನಗರಪಾಲಿಕೆ ವತಿಯಿಂದ ಸೈಕಲ್ ಜಾಥಾ ಆಯೋಜಿಸಲಾಗಿತ್ತು. ಜಾಥಾದಲ್ಲಿ ನೂರಾರು ಎನ್ ಸಿಸಿ ವಿದ್ಯಾರ್ಥಿಗಳು, ಶಾಲಾ ಮಕ್ಕಳು , ಹಿರಿಯರು ಭಾಗಿಯಾಗಿದ್ದರು.
ಬ ಜಾಥಾಕ್ಕೆ ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಚಾಲನೆ ನೀಡಿದರು. ಜಲವೇ ಜೀವ, ಕಾಡು ಬೆಳಿಸಿ ನಾಡು ಉಳಿಸಿ, ಕಾಡು ಕೃಷಿ ಬೆಂಬಲಿಸಿ, ನೀರಾವರಿ ಬೆಳೆ ನಿಲ್ಲಿಸಿ ಮನುಕುಲ ಮತ್ತು ಜಲ ಮೂಲ ರಕ್ಷಿಸಿ, ಸರ್ವರಿಗೂ ಜಲ ಸದಾಕಾಲ, ಹಸಿರೇ ಉಸಿರು ಹೀಗೆ.. ಜಲ ಜಾಗೃತಿ ಘೋಷಣೆ ಕೂಗುತ್ತಾ ಜಾಥಾ ನಡೆಸಲಾಯಿತು.
ದಾವಣಗೆರೆ ಮಹಾನಗರ ಪಾಲಿಕೆ ಆವರಣದಿಂದ – ಕಾಲೇಜ್ ರೋಡ್ ಮಾರ್ಗವಾಗಿ ವಿದ್ಯಾರ್ಥಿ ಭವನ, ಗುಂಡಿ ಸರ್ಕಲ್, ಲಕ್ಷ್ಮೀಪ್ಲೋರ್ ಮಿಲ್, ರಿಂಗ್ ರೋಡ್ , ಪಿ ಅಂಡ್ ಟಿ ಸರ್ಕಲ್‍ನಿಂದ ಪುನಃ ಪಾಲಿಕೆ ಆವರಣದವರೆಗೂ ಸೈಕಲ್ ಜಾಥಾ ನಡೆಸಲಾಯಿತು.