ಡಿವಿಜಿ ಸುದ್ದಿ, ದಾವಣಗೆರೆ: ನಗರದಲ್ಲಿ ರಾಜನಹಳ್ಳಿ ಪಂಪ್‍ಹೌಸ್‍ನಲ್ಲಿ ಪಂಪ್‍ಗಳ ದುರಸ್ತಿ ಕಾರ್ಯ ನಡೆಯುತ್ತಿದ್ದು, ಪಾಲಿಕೆ ಅಧಿಕಾರಿಗಳು ನಿರಂತರವಾಗಿ ಪಂಪ್ ದುರಸ್ತಿ ಕಾರ್ಯದಲ್ಲಿ ತೊಡಗಿರುತ್ತಾರೆ. ಇದರಿಂದ ನಗರದಲ್ಲಿ ನೀರು ಪೂರೈಕೆಗೆ ವ್ಯತ್ಯಯವಾಗಲಿದೆ.
ಪಂಪ್ ದುರಸ್ತಿಯ ನಂತರ ನಗರಕ್ಕೆ ನೀರು ಪೂರೈಸಲಾಗುವುದು. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಹಾ ನಗರಪಾಲಿಕೆಯೊಂದಿಗೆ ಸಹಕರಿಸುವಂತೆ ಮಹಾನಗರಪಾಲಿಕೆ ಆಯುಕ್ತರು ತಿಳಿಸಿದ್ದಾರೆ.



