ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯಸಭೆಗೆ ನಾನು ಅವಿರೋಧ ಆಯ್ಕೆಯಾಗಲು ಕಾಂಗ್ರೆಸ್ ಪಕ್ಷ ಒಂದೇ ಕಾರಣವಲ್ಲ, ಬಿಜೆಪಿ ಸಹಕಾರ ಕೂಡ ಇದೆ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.
ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದರೂ ಮೂರನೇ ಅಭ್ಯರ್ಥಿ ಕಣಕ್ಕೆ ಇಳಿಸಲಿಲ್ಲ ಎಂಬುದನ್ನು ಲಿಂಬಾವಳಿ ಅವರು ನನಗೆ ತಿಳಿಸಿದ್ದರು. ಹೀಗಾಗಿ ನಾನು ರಾಜ್ಯ ಸಭೆ ಅವಿರೋಧ ಆಯ್ಕೆಗೆ ಕಾಂಗ್ರೆಸ್ ಸಹಕಾರದ ಜೊತೆ ಬಿಜೆಪಿ ಸಹಕಾರವೂ ಇದೆ ಎಂದರು.
ದೆಹಲಿಯಿಂದ ಮೇಡಂ ಸೋನಿಯಾ ಗಾಂಧಿ ಅವರು ವಿಡಿಯೊ ಕಾನ್ಫರೆನ್ಸ್ನಲ್ಲಿ ಕಾಂಗ್ರೆಸ್ ಬೆಂಬಲ ನೀಡುವುದಾಗಿ ಹೇಳಿದರು. ಇದಕ್ಕೆ ಕಾಂಗ್ರೆಸ್ ಕಾಂಗ್ರೆಸ್ ಪಕ್ಷಕ್ಕೆ ಧನ್ಯವಾದ ತಿಳಿಸುತ್ತೇನೆ. ಇನ್ನು ಬಿಜೆಪಿಯಿಂದ ಲಿಂಬಾವಳಿ ಫೋನ್ ನಲ್ಲಿ ಇಳಿದ್ದು ಬಿಟ್ಟರೆ, ಬಿಜೆಪಿಯಿಂದ ಯಾರು ಕೂಡ ಭೇಟಿಯಾಗಿಲ್ಲ. ಕುಮಾರಸ್ವಾಮಿ ಚುನಾವಣೆಗೆ ಸ್ಪರ್ಧಿಸುವಂತೆ ಹೇಳಿದೆ, ಆದರೆ, ನಮ್ಮ ಪಕ್ಷದ ಶಾಸಕರು ಒತ್ತಾಯದಿಂದ ನನ್ನನ್ನು ಒಪ್ಪಿಸಿದರು ಎಂದು ತಿಳಿಸಿದರು.
ನಾನು ಜೀವನದುದ್ದಕ್ಕೂ ಜಾತ್ಯತೀತ ನಿಲುವಿಗೆ ಹೋರಾಟ ಮಾಡಿದ್ದೇನೆ. ಜನರ ಸಮಸ್ಯೆ ಕೈಗೆತ್ತಿಕೊಂಡು ಹೋರಾಟ ಮಾಡುವಾಗ ಯಾರ ಮುಲಾಜಿಗೂ ಒಳಗಾಗಲ್ಲ. ಇದು ಕೊನೆ ಹೋರಾಟ ಇರಬಹುದು. ಜೀವನದಲ್ಲಿ ಸಿದ್ಧಾಂತದ ಜೊತೆ ಯಾವುದೇ ರಾಜಿ ಇಲ್ಲ ಎಂದರು.