ಡಿವಿಜಿ ಸುದ್ದಿ, ದಾವಣಗೆರೆ : ರಾಜ್ಯ ಸರ್ಕಾರವು ಪರೀಕ್ಷೆ ನಡೆಸುವ ತೀರ್ಮಾನ ತೆಗೆದುಕೊಂಡಿರುವುದು ಖಂಡನೀಯ. ರಾಷ್ಟ್ರಾದಾದ್ಯಂತ ಕೊರೊನಾ ಸೊಂಕು ತೀವ್ರಗತಿಯಲ್ಲಿ ಹರಡುತ್ತಿರುವುದು ತುಂಬಾ ಅಘಾತಕಾರಿ ಸಂಗತಿ. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸದೇ ಎಲ್ಲಾ ವಿದ್ಯಾರ್ಥಿಗಳನ್ನು ನೇರವಾಗಿ ಪಾಸ್ ಮಾಡುವಂತೆ ಎನ್ ಎಸ್ ಯುಐ ಸರ್ಕಾರವನ್ನು ಆಗ್ರಹಿಸಿದೆ.
ಈ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಾಗು ರಾಜ್ಯ ಉನ್ನತ ಶಿಕ್ಷಣ ಸಚಿವರಿಗೆ ಮನವಿ ಮಾಡಲಾಯಿತು. ಎನ್.ಎಸ್.ಯು.ಐ ರಾಜ್ಯ ಕಾರ್ಯದರ್ಶಿ ಮೊಹಮ್ಮದ್ ಮುಷಾಯಿದ್ ಫಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ್ ಪಾಟೀಲ್, ಚಂದನ ಆರಾಧ್ಯ,ಅಮಿತ್, ವೀರೇಶ್, ಸಚಿನ್ ಭಾಗಿಯಾಗಿದ್ದರು.
ಪರೀಕ್ಷೆ ನಡೆಸಿದರೆ ಸೋಂಕು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಸೋಂಕು ಹರಡದಂತೆ ನೋಡಿಕೊಳ್ಳುವುದು ಸರ್ಕಾರವೇ ಜವಾಬ್ದಾರಿಯಾಗಿದ್ದು, ವಿದ್ಯಾರ್ಥಿಗಳು ಭಯದಿಂದ ಪರೀಕ್ಷೆ ಬರೆಯುವ ಸನ್ನಿವೇಶ ಎದುರಾಗಿದೆ. ಪರೀಕ್ಷೆ ಬರೆಯಲು ಕೆಲ ವಿದ್ಯಾರ್ಥಿಗಳು ಹೊರ ರಾಜ್ಯದಿಂದ ಕಂಟೈನೈಂಟ್ ವಲಯದಿಂದ ಬಂದು ಬರೆಯಬೇಕಿದೆ.
ಇಂತಹ ಸಂದರ್ಭದಲ್ಲಿ ಸೋಂಕು ಹರಡುವ ಸಂಭವ ಅತಿ ಹೆಚ್ಚು. ವಿದ್ಯಾರ್ಥಿಗಳ ಭವಿಷ್ಯ ಎಷ್ಟು ಮುಖ್ಯವೋ, ವಿದ್ಯಾರ್ಥಿಗಳ ಜೀವನವೂ ಅಷ್ಟೇ ಮುಖ್ಯ ಹಾಗೂ ಎಲ್ಲಾ ಕಾಲೇಜ್‌ಗಳ ಆನ್‌ಲೈನ್ ತರಗತಿಗಳಿಗೆ ಮೊರೆ ಹೋಗಿದ್ದಾರೆ. ಆರು ತಿಂಗಳಾದರೂ ಪಠ್ಯ ಪೂರ್ಣಗೊಳಿಸಲು ಹರ ಸಾಹಸ ಪಡುವ ಶಿಕ್ಷಕರು ಕೇವಲ ಎರಡು ತಿಂಗಳಲ್ಲಿ ಆನ್‌ಲೈನ್ ಪಠ್ಯದಲ್ಲಿ ಪೂರ್ಣಗೊಳಿಸಿದ್ದೇವೆಂದು ನಿಟ್ಟುಸಿರು ಬಿಟ್ಟಿದ್ದಾರೆ.ಆದರೆ ವಿದ್ಯಾರ್ಥಿಗಳಿಗೆ ದಿಕ್ಕು ತೋಚದಂತಾಗಿದೆ. ಪಾಠವು ಅರ್ಥವಾಗದೆ, ಸೋಂಕಿನ ಭಯದ ವಾತಾವರಣದಲ್ಲಿ ಪರೀಕ್ಷೆ ಬರೆಯಲು ಸಾಧ್ಯವಿಲ್ಲ.ರಾಜ್ಯ ಸರ್ಕಾರವು ಈ ವಿಷಯವನ್ನು ಮನಗಂಡು ಪರೀಕ್ಷೆ ನಡೆಸದೆ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಬೇಕೆಂದು ಮನವಿ ಮಾಡಿದ್ದಾರೆ.



