ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿಂದು 6 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಇಂದು ಬಿಡುಗಡೆ ಹೊಂದಿದ್ದಾರೆ.
ಜಾಲಿನಗರ ಒಂದರಲ್ಲಿಯೇ 99 ಕೇಸ್
ಇಂದು ಪತ್ತೆಯಾದ ಆರು ಪ್ರಕಣಗಳಲ್ಲಿ 5 ಜಾಲಿನಗರಕ್ಕೆ ಸೇರಿದವರಾಗಿದ್ದಾರೆ. ಇನ್ನೊಂದು ಆನೆಕೊಂಡಕ್ಕೆ ಸೇರಿದವರಾಗಿದ್ದಾರೆ. ಈ ಮೂಲಕ ಜಾಲಿನಗರದಲ್ಲಿ ಬರೋಬ್ಬರಿ 99 ಪಾಸಿಟಿವ್ ಕೇಸ್ ಪತ್ತೆಯಾದಂತಾಗಿದೆ.
- 33 ವರ್ಷದ ಪುರುಷ ಕಂಟೈನ್ಮೆಂಟ್ ಝೋನ್ ಸಂಪರ್ಕ
- 64 ವರ್ಷದ ವೃದ್ದ ರೋಗಿ ಸಂಖ್ಯೆ 3862 ಸಂಪರ್ಕ
- 36 ವರ್ಷದ ಮಹಿಳೆ ರೋಗಿ ಸಂಖ್ಯೆ 2417 ಸಂಪರ್ಕ
- 60 ವರ್ಷದ ಮಹಿಳೆ ರೋಗಿ ಸಂಖ್ಯೆ 2417 ಸಂಪರ್ಕ
- 35 ವರ್ಷದ ಮಹಿಳೆ ರೋಗಿ ಸಂಖ್ಯ 1485 ಸಂಪರ್ಕ
- 42 ವರ್ಷದ ಮಹಿಳೆ ರೋಗಿ ಸಂಖ್ಯೆ 1485 ಸಂಪರ್ಕ
ಇಂದು ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಿಂದ ರೋಗಿ ಸಂಖ್ಯೆ 2415 ಮತ್ತು ರೋಗಿ ಸಂಖ್ಯೆ 2208 ಇವರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಒಟ್ಟು ಈವರೆಗೆ 186 ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 149 ಸೋಂಕಿತರು ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಒಟ್ಟು 31 ಸಕ್ರಿಯ ಪ್ರಕರಣಗಳಿದ್ದು 06 ಜನ ಮೃತಪಟ್ಟಿದ್ದಾರೆ.



