ಡಿವಿಜಿ ಸುದ್ದಿ, ದಾವಣಗೆರೆ: ಮನುಷ್ಯನ ಆರೋಗ್ಯ ಹಾಗೂ ಆಹಾರದ ಸಮತೋಲನಾ ಉತ್ಪಾದನೆಗೆ ಅರಣ್ಯ ಸಸಿಗಗಳನ್ನು ಬೆಳೆಸುವುದು ಅಗತ್ಯವಾಗಿದೆ ಎಂದು ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ದೇವರಾಜ್ ಟಿ.ಎನ್ ಸಲಹೆ ನೀಡಿದರು.
ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ಗ್ರಾಮ ಪಂಚಾಯಿತಿ ಕಂದನಕೋವಿ ಸಹಯೋಗದೊಂದಿಗೆ ‘ವಿಶ್ವ ಪರಿಸರ ದಿನಾಚರಣೆ’ ಯನ್ನು ಸಸಿ ನೆಡುವ ಮೂಲಕ ಆಚರಿಸಲಾಯಿತು.
ನಂತರ ಮಾತನಾಡಿದ ಅವರು, ವಿಶ್ವ ಮಟ್ಟದಲ್ಲಿ 19 74 ರಿಂದ ವಿಶ್ವ ಪರಿಸರ ದಿನಾಚರಣೆ ಆಚರಿಸುತ್ತಾ ಬಂದಿದ್ದು. ಈ ವರ್ಷದ ಘೋಷವಾಕ್ಯ ‘ಪ್ರಕೃತಿಗೆ ಸಮಯ’ ಎಂದಾಗಿದ್ದು, ಎಲ್ಲರೂ ಪ್ರಕೃತಿಯ ಸಂರಕ್ಷಣೆ ಕಡೆಗೆ ಸಮಯ ಕೊಡುವ ಕಾಲ ಬಂದಿದೆ. ಈ ಕಾರ್ಯದ ಕಡೆ ಗಮನಹರಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ವಿಕೋಪಗಳು ಜಾಸ್ತಿಯಾಗುವ ಎಲ್ಲಾ ಲಕ್ಷಣಗಳಿವೆ ಎಂದರು.
ಕಾರ್ಯಕ್ರಮದಲ್ಲಿ ಕಂದನಕೋವಿ ಗ್ರಾಮಪಂಚಾಯಿತಿ ಅಧ್ಯಕ್ಷೆ ನಾಗರತ್ನಮ್ಮ, ಉಪಾಧ್ಯಕ್ಷ ಅಜ್ಜಪ್ಪ, ಮಾಜಿ ಅಧ್ಯಕ್ಷ ವಿಜಯಕುಮಾರಿ ಹಾಗೂ ಸದಸ್ಯರುಗಳು, ಕಾರ್ಯದರ್ಶಿ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಕೃಷಿ ವಿಸ್ತರಣಾ ತಜ್ಞ ರಘುರಾಜ ಜೆ. ಉಪಸ್ಥಿತರಿದ್ದರು.



