ಡಿವಿಜಿ ಸುದ್ದಿ, ಹರಿಹರ: ಸಂತ ಅಲೋಶಿಯಸ್ ಕಾಲೇಜಿನಲ್ಲಿ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸಸಿಗಳನ್ನು ನೆಡಲಾಯಿತು.
ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರವಿ ಕುಮಾರ್ ಅವರ ತಮ್ಮ ಹುಟ್ಟುಹಬ್ಬವನ್ನು ಸಸಿ ನೆಡುವ ಮೂಲಕ ಆಚರಿಸಿದರು.
ಕಾರ್ಯಕ್ರಮ ನಂತರ ಕಾಲೇಜಿನ ಮುಖ್ಯಸ್ಥ ಫಾದರ್ ಎರಿಕ್ ಮತಾಯಸ್ ಮಾತನಾಡಿ, ಮನುಷ್ಯ ಭೂಮಿ ಮೇಲೆ ಉಳಿಯಬೇಕಾದರೆ, ಪರಿಸರ ಅತ್ಯಗತ್ಯ. ಪರಿಸರ ಕಾಳಜಿ ಪ್ರತಿಯೊಬ್ಬರ ಮೇಲಿದೆ. ನಾವು ಪರಿಸರಕ್ಕೆ ಏನು ಕೊಡದಿದ್ದರೂ, ಪರವಾಗಿಲ್ಲ. ನಾಶವನ್ನು ಮಾತ್ರ ಮಾಡಬಾರದು ಎಂದು ಕರೆ ನೀಡಿದರು.ಹರಿಹರ ಗ್ರಾಮೀಣ ಭಾಗದಲ್ಲಿನ ಸಮಸ್ಯೆಗಳಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿರುವ ರವಿಕುಮಾರ್ ಅವರು ಸಾರ್ಥಕ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ರವಿಕುಮಾರ್, ಸಂತ ಅಲೋಶಿಯಸ್ ಕಾಲೇಜು ಕೊರೋನಾ ಮಹಾಮಾರಿ ಇಂದ ತತ್ತರಿಸಿರುವ ಹರಿಹರ ತಾಲೂಕಿನಲ್ಲಿ ಬಡವರಿಗೆ ಆಹಾರದ ಕಿಟ್ ಗಳನ್ನು ವಿತರಿಸುವುದು ಶ್ಲಾಘನೀಯ. ಇದರ ಜೊತೆಗೆ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವ ಮೂಲಕ ಸಾಮಾಜಿಕ ಕಾಳಜಿ ಮೆರೆದ ಕಾಲೇಜಿನ ಮುಖ್ಯಸ್ಥರಿಗೆ ಧನ್ಯವಾದಗಳು ಎಂದರು.

ಈ ಸಂದರ್ಭದಲ್ಲಿ ಕಾಲೇಜಿನ ಮುಖ್ಯಸ್ಥರಾದ ಏರಿಕ್ ಮತಾಯಸ್, ಫಾದರ್ ರಾಯಪ್ಪ, ಪ್ರಾಂಶುಪಾಲರಾದ ಸನ್ನಿ ಗುಡಿನೋ, ಉಪಪ್ರಾಂಶುಪಾಲ ಪುಷ್ಪಲತಾ ಅರಸ್ ಮತ್ತು ಪ್ರಿನ್ಸಿ ಫ್ಲಾವಿಯಾ ಪಿಂಟೊ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಹಾಜರಿದ್ದರು.



