ಡಿವಿಜಿ ಸುದ್ದಿ, ದಾವಣಗೆರೆ: ನಗರ ಪಿಬಿ ರಸ್ತೆಯ ಪುಟ್ ಪಾತ್ ನಲ್ಲಿ ಸಸಿ ನೆಡುವ ಮೂಲಕ ಪರಿಸರ ಪ್ರೇಮಿಗಳು ವಿಶ್ವ ಪರಿಸರ ದಿನಾಚರಣೆ ಯನ್ನು ಆಚರಿಸಿದರು.
ಅರಣ್ಯ ಇಲಾಖೆಯ ಸಹಯೋಗದಿಂದ ನಗರದ ಮುಖ್ಯ ರಸ್ತೆ ಸೇರಿದಂತೆ ಅನೇಕ ಕಡೆ ಸಸಿಗಳನ್ನು ನಡೆಲಾಯಿತು. ಕಳೆದ ಐದಾರು ವರ್ಷಗಳಿಂದ ಪಿ.ಬಿ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಅನೇಕ ಮರಗಳ ಮಾರಣ ಹೋಮ ನಡೆಸಿದ್ದರು. ಇದೀಗ ಬೆಂಗಳೂರು-ಪುಣೆ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಡಲಾಗಿದ್ದು, ಪಕ್ಷಿಗಳಿಗೆ ಆಶ್ರಯ ತಾಣವಾಗುವುದರ ಜೊತೆಗೆ ತಂಪಾದ ನೆರಳು ನೀಡಲಿದೆ.
ಮಹಾನಗರ ಪಾಲಿಕೆ ಪಿಬಿ ರಸ್ತೆಯ ಪುಟ್ ಪಾತ್ ನಲ್ಲಿ ಅರಣ್ಯ ಇಲಾಖೆಯ ಸಸಿಗಳನ್ನು ನೆಡಬೇಕೆಂದು ಈ ಮೂಲಕ ಪರಿಸರ ಪ್ರೇಮಿಗಳು ಆಗ್ರಹಿಸಿದ್ದರು. ಇಂದು ಟೋಕೋಮಿಯಾ ಹಾಗೂ ಮಹಾಘನಿ ಗಿಡಗಳನ್ನು ನೆಡಲಾಗದ್ದು, ಪಾಲಿಕೆ ಹಾಗೂ ಸ್ಮಾರ್ಟ ಸಿಟಿ ಅಧಿಕಾರಿಗಳು ಇವುಗಳಿಗೆ ಟ್ರೀ ಗಾರ್ಡ ಹಾಕಬೇಕು ಹಾಗೂ ನಗರದಲ್ಲಿ ಅರಣ್ಯ ಇಲಾಯೆ ಸಸಿಗಳನ್ನು ಮಾತ್ರ ನೆಡಬೇಕೆಂದು ಒತ್ತಾಯಿಸದರು.
ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಲುಮರದ ವೀರಾಚಾರಿ,ಪರಿಸರ ಪ್ರೇಮಿಗಳಾದ ಎಂ ಜಿ ಶ್ರೀಕಾಂತ್,ಕೆ ಟಿ ಗೋಪಾಲಗೌಡ, ಹೊನ್ನೂರ್ ಆಲಿ, ಮಾದೇಶ್ , ಡಿ ಟಿ ಡಿ ಸಿ ಕೋರಿಯರ್ ಸಿಬ್ಬಂದ್ದಿಗಳಾದ ಸಿದ್ದಯ್ಯ ಜಿ ,ಜಿ ಮಂಜುನಾಥ್, ಪರಶುರಾಮ್.ಗೀರಿಶ್, ನೇತ್ರ, ಲೈಫ್ ಲೈನ್ ಸಂಸ್ಥೆಯ ಅನಿಲ್ ಬಾರೆಂಗಳ್,ಇನಾಯತ್ , ಶ್ರೀಧರ್, ಹನುಮೆಗೌಡ, ಪುಟ್ಟರಾಜ, ಚಂದ್ರಶೇಖರ್, ರಂಗನಾಥಸ್ವಾಮಿ ಭಾಗವಹಿಸಿದ್ದರು.