ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ವೈರಸ್ ನಿಂದ ಬಲಿಯಾದ ವೃದ್ಧೆಯರ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯರಿಗೆ ಕಾರಣ ಕೇಳಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ನೋಟಿಸ್ ನೀಡಿದ್ದಾರೆ.

ಆಸ್ಪತ್ರೆಯಲ್ಲಿ ವೃದ್ಧೆಯನ್ನು ಸೇರಿಸಿಕೊಳ್ಳಲು ವೈದ್ಯರು ವಿಳಂಬ ಮಾಡಿದ್ದಾರೆ ಎಂಬ ದೂರಿನ ಅನ್ವಯ ವೈದ್ಯ ಸಿಬ್ಬಂದಿಗೆ ನೋಟಿಸ್ ನೀಡಿದ್ದಾರೆ.ಮೇ. 28 ಮತ್ತು 31 ರಂದು ದಾವಣಗೆರೆಯಲ್ಲಿ ಇಬ್ಬರು ಸೋಂಕಿತ ವೃದ್ಧೆಯರು ಬಲಿಯಾಗಿದ್ದರು.
ಈ ಇಬ್ಬರ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂಬ ಆರೋಪ ಕೇಳಿ ಬಂದಿತ್ತು. ಹೀಗಾಗಿ ವಿಳಂಬಕ್ಕೆ ಕಾರಣ ಕೇಳಿ ಡಿಸಿ ನೋಟಿಸ್ ನೀಡಿದ್ದಾರೆ. 83 ವರ್ಷದ ಬಸವರಾಜಪೇಟೆ ವೃದ್ಧೆ ಹಾಗೂ 80 ವರ್ಷದ ಜಾಲಿನಗರ ವೃದ್ಧೆಯರು ಕೊರೊನಾ ವೈರಸ್ ಗೆ ಬಲಿಯಾಗಿದ್ದರು.



