ಡಿವಿಜಿ ಸುದ್ದಿ, ದಾವಣಗೆರೆ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಭಾವಚಿತ್ರಕ್ಕೆ ವೇಸ್ಟ್ ಆಯಿಲ್ ಬಳಿದು ವಿರೂಪಗೊಳಿಸಿದ ಪ್ರಕರಣದ ಆರೋಪಿನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆಯ ಭರತ್ ಕಾಲೋನಿ ನಿವಾಸಿಯಾದ 36 ವರ್ಷದ ಆರೋಪಿ ಉಮೇಶ್ ಕತ್ತಿ ಎಂಬಾತನನ್ನು ಕೆಟಿಜೆ ನಗರ ಪೊಲೀಸರು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಆರೋಪಿಯನ್ನು ವಿಚಾರಣೆ ಮಾಡಿದಾಗ ಯಲಹಂಕ ಫ್ಲೈಓವರ್ ಗೆ ಸಾವರ್ಕರ್ ಹೆಸರಿಡಲು ಕಾಂಗ್ರೆಸ್ ಪಕ್ಷದವರು ವಿರೋಧಿಸಿದ್ದರು.
ನಾನು ಸಾವರ್ಕರ್ ಅನುಯಾಯಿಯಾಗಿದ್ದು, ಇದು ನನಗೆ ಭಾರೀ ನೋವು ಉಂಟು ಮಾಡಿತ್ತು. ನಮ್ಮ ರಾಜ್ಯದವರು ಅಲ್ಲದ ಇಂದಿರಾ ಗಾಂಧಿಯನ್ನು ನಮ್ಮ ರಾಜ್ಯದ ಕ್ಯಾಂಟೀನ್ ಗೆ ಯಾಕೆ ಇಟ್ಟಿದ್ದಾರೆ. ಹೀಗಾಗಿ ಇಂದಿರಾ ಗಾಂಧಿ ಭಾವ ಚಿತ್ರ ವಿರೂಪಗಿಳಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.
ದಾವಣಗೆರೆಯ ಜಿಲ್ಲಾಸ್ಪತ್ರೆ ಮತ್ತು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಹಿಂಭಾಗ ಇರುವ ಇಂದಿರಾ ಕ್ಯಾಂಟೀನ್ ಭಾವಚಿತ್ರಕ್ಕೆ ಆಯಿಲ್ ಬಳಿಯಲಾಗಿತ್ತು. ಈ ಬಗ್ಗೆ ಕಾಂಗ್ರೆಸ್ ಪಕ್ಷ ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ ಮಾಡಿತ್ತು.