ಡಿವಿಜಿ ಸುದ್ದಿ, ಗದಗ: ಬೆಂಗಳೂರಿನ ಯಲಹಂಕ ಫ್ಲೈಓವರ್‌ಗೆ ವೀರ ಸಾವರ್ಕರ್ ಅವರ ಹೆಸರಿನ ಬದಲು ರಾಹುಲ್, ಸೋನಿಯಾ ಗಾಮಧಿ ಹೆಸರಿಡಬೇಕಾ ಎಂದು ಸಚಿವ ಸಿ.ಸಿ. ಪಾಟೀಲ್ ಪ್ರಶ್ನಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫ್ಲೈಓವರಿಗೆ ವೀರ ಸಾವರ್ಕರ್ ಹೆಸರಿಡದೆ, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ನಾಯಕಿ ಸೋನಿಯಾ ಗಾಂಧಿ ಹೆಸರಿಡಬೇಕಾ? ಕಾಂಗ್ರೆಸ್ ಅವರು ಮೊದಲು ಸಾವರ್ಕರ್ ತ್ಯಾಗ, ಬಲಿದಾನ, ಸೆಲ್ಯುಲಾರ್ ಜೈಲುವಾಸದ ಬಗ್ಗೆ ತಿಳಿದುಕೊಳ್ಳಲಿ. ಸಾವರ್ಕರ್ ಅವರ ಬಗ್ಗೆ ಮಾತಾಡುವಂತ ಯೋಗ್ಯತ ಕಾಂಗ್ರೆಸ್ಸಿಗರಿಗೆ ಇಲ್ಲ ಎಂದರು.
ಕಾಂಗ್ರೆಸ್ ನವರಿಗೆ ತ್ಯಾಗ ಮಾಡಿದ ಸುಭಾಷ್ ಚಂದ್ರಬೋಸ್, ವೀರ ಸಾವರ್ಕರ್, ಸರ್ದಾರ್ ವಲ್ಲಭಬಾಯಿ ಪಟೇಲ್, ಲೋಕಮಾನ್ಯ ತಿಲಕ್ ಅವರು ಗೊತ್ತಿಲ್ಲ . ವೀರ ಸಾವರ್ಕರ್ ಬಿಜೆಪಿಯವರ..? ಆ ಬಿಜೆಪಿ ಇತ್ತಾ ಎಂದರು.
ರಾಜೀವ್ ಗಾಂಧಿ ಮೆಡಿಕಲ್ ಕಾಲೇಜ್, ರಾಜೀವ್ ಗಾಂಧಿ ರೋಡ್, ಇಂದಿರಾ ಗಾಂಧಿ ಅಂತಾ ಎಲ್ಲಾ ರೋಡ್ ಗಳಿಗೆ ಹೆಸರಿಟ್ಟಿದ್ದಾರೆ. ನರೇಂದ್ರ ಮೋದಿ ರೋಡ್, ಬಿ.ಎಸ್.ಯಡಿಯೂರಪ್ಪ ರೋಡ್ ಅಂತ ಇದೆಯಾ? ದೇಶವನ್ನು ಇವರೇ ಕಟ್ಟಿ ಬೆಳೆಸಿದ್ರಾ..? ಕಾಂಗ್ರೆಸ್ಸಿಗರು ಹೇಳೋದು ಆಚಾರ ತಿನ್ನೋದು ಬದನೆಕಾಯಿ ಎಂದು ಗುಡುಗಿದರು.