ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿಂದು ಬರೋಬ್ಬರಿ 299 ಜನರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಸೋಂಕಿತರ ಸಂಖ್ಯೆ 3221 ಕ್ಕೆ ಏರಿಕೆಯಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಬುಲೆಟಿನ್ ಪ್ರಕಾರ, ಬೆಂಗಳೂರು 21, ಯಾದಗಿರಿ 44, ಕಲಬುರಗಿ 28, ಮಂಡ್ಯ 13, ರಾಯಚೂರು 83, ಉಡುಪಿ 10, ಬೀದರ್ 33, ಬೆಳಗಾವಿ 13, ದಾವಣಗೆರೆ 6, ದಕ್ಷಿಣ ಕನ್ನಡ 14, ವಿಜಯಪುರ 26, ಬಳ್ಳಾರಿ 1, ಶಿವಮೊಗ್ಗ 1, ಕೋಲಾರ 1 ಪ್ರಕರಣ ಬೆಳಕಿಗೆ ಬಂದಿವೆ.
299 ಪ್ರಕರಣಗಳಲ್ಲಿ 255 ಜನರು ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಏಳು ಜನ ಅಂತರಾಷ್ಟ್ರೀಯ ಪ್ರಯಾಣಿಕರು ಸೇರಿದ್ದಾರೆ. ಒಟ್ಟು 221 ಮಂದಿ ಕೊರೊನಾದಿಂದ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೂ ರಾಜ್ಯದಲ್ಲಿ 1218 ಜನರು ಗುಣಮುಖರಾಗಿದ್ದು, 3221ರಲ್ಲಿ 1950 ಸಕ್ರಿಯ ಪ್ರಕರಣಗಳಿವೆ.



