ಡಿವಿಜಿ ಸುದ್ದಿ, ಬೆಂಗಳೂರು: ಕೇಂದ್ರ ಸರ್ಕಾರ ಜೂನ್ 30 ವರೆಗೆ ಲಾಕ್ ಡೌನ್ ವಿಸ್ತರಣೆ ಮಾಡಿದ್ದು, ಕಂಟೈನ್‌ಮೆಂಟ್ ವಲಯ ಹೊರತುಪಡಿಸಿ ಉಳಿದ ಕಡೆ ಮಾಲ್, ರೆಸ್ಟೊರೆಂಟ್ ಹಾಗೂ ಧಾರ್ಮಿಕ ಮಂದಿರಗಳು ಬಾಗಿಲು ತೆರೆಯಲಿವೆ.
ಈ ಬಗ್ಗೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಶನಿವಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಹಂತ ಹಂತವಾಗಿ ಲಾಕ್‌ಡೌನ್ ತೆರವುಗೊಳಿಸುವುದು ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಚೇತರಿಕೆ ತರಲು ಮಾರ್ಗ ಸೂಚಿ ರೂಪಿಸಿದೆ.
ಶಾಲಾ, ಕಾಲೇಜ್ , ಸಿನಿಮಾ ಪ್ರದರ್ಶನಕ್ಕಿಲ್ಲ ಅವಕಾಶ
ಧಾರ್ಮಿಕ ಸ್ಥಳಗಳು, ಹೊಟೇಲ್ ಮತ್ತು ರೆಸ್ಟೊರೆಂಟ್, ಮಾಲ್ ತೆರೆಯಲು ಜೂನ್ 8ರಿಂದ ಅವಕಾಶ ನೀಡಲಾಗಿದ್ದು, ಸಿನಿಮಾ ಮಂದಿರಗಳಿಗೆ ಅವಕಾಶ ನೀಡಿಲ್ಲ. ಇನ್ನು ಶಾಲೆ ಮತ್ತು ಕಾಲೇಜು ಪುನರಾರಂಭಿಸುವ ಬಗ್ಗೆ ಜುಲೈನಲ್ಲಿ ನಿರ್ಧರಿಸಲಾಗುತ್ತದೆ. ರಾಜ್ಯ ಸರ್ಕಾರಗಳು, ಪಾಲಕರು ಹಾಗೂ ಶಿಕ್ಷಣ ಸಂಸ್ಥೆಗಳೊಂದಿಗೆ ಚರ್ಚೆಯ ನಂತರ ನಿರ್ಧಾರ.
ನಾಳೆ ಮೇ 31ರಂದು 4 ಹಂತದ ಲಾಕ್ ಡೌನ್ ಮುಕ್ತಾಯವಾಗಲಿದ್ದು, 5 ಹಂತದ ಲಾಕ್ ಡೌನ್ ನಲ್ಲಿ ರಾತ್ರಿ ಕರ್ಫ್ಯೂ ಸಲಿಸಲಾಗಿದೆ0. ರಾತ್ರಿ 7ರಿಂದ ಬೆಳಿಗ್ಗೆ 7ರ ಬದಲು, ರಾತ್ರಿ 9ರಿಂದ ಬೆಳಿಗ್ಗೆ 5ರ ವರೆಗೂ ನಿಗದಿ ಪಡಿಸಲಾಗಿದೆಕೋವಿಡ್–19 ಪ್ರಕರಣಗಳು ಹೆಚ್ಚಿರುವ, ಕಂಟೈನ್‌ಮೆಂಟ್ ವಲಯ ಎಂದು ಗುರುತಿಸಲಾಗಿರುವ ಪ್ರದೇಶಗಳಲ್ಲಿ ಜೂನ್ 30ರ ವರೆಗೂ ಲಾಕ್‌ಡೌನ್ ಮುಂದುವರಿಯಲಿದೆ.
From 01.06.2020
●Within Containment Zones, #Lockdown restrictions to continue till 30.06.2020
●#Unlock1 All activities to be relaxed in phased manner outside containment zones, as per @MoHFW_INDIA guidelines
●States may impose restrictions/prohibit activities as per assessment pic.twitter.com/LDbmvf6Gfa— PIB – Ministry of Home Affairs (@PIBHomeAffairs) May 30, 2020
ಕಂಟೈನ್‌ಮೆಂಟ್ ವಲಯಗಳಲ್ಲಿ ಅತ್ಯಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಪ್ರವೇಶ ಮತ್ತು ಹೊರ ನಡೆಯುವ ಜಾಗವನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗುತ್ತದೆ ಹಾಗೂ ಸೋಂಕಿತರ ಸಂಪರ್ಕಿತರ ಮೇಲೆ ತೀವ್ರ ನಿಗಾವಹಿಸಲಾಗುತ್ತದೆ.
ಅಂತರರಾಷ್ಟ್ರೀಯ ವಿಮಾನಗಳ ಸಂಚಾರ, ಮೆಟ್ರೊ ರೈಲು ಸಂಚಾರ, ಸಿನಿಮಾ ಮಂದಿರಗಳು ಹಾಗೂ ಜಿಮ್‌ಗಳ ಪುನರಾರಂಭ, ಈಜು ಕೊಳ, ಮನರಂಜನೆ ಪಾರ್ಕ್‌ಗಳನ್ನು ಮತ್ತೆ ತೆರೆಯುವ ದಿನಾಂಕವನ್ನು ಪರಿಸ್ಥಿತಿಗೆ ಅನುಗುಣವಾಗಿ ನಿರ್ಧರಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ದೇಶದಲ್ಲಿ ಮಾರ್ಚ್ 25ರಿಂದ ಲಾಕ್‌ಡೌನ್ ಜಾರಿಯಲ್ಲಿದೆ. ದೇಶದಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1.7 ಲಕ್ಷ ದಾಟಿದೆ. ಒಟ್ಟು 5 ಸಾವಿರ ಜನ ಮೃತಪಟ್ಟಿದ್ದಾರೆ.



