ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯಲ್ಲಿ ಇಂದು 4 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 150 ಕ್ಕೆ ಏರಿಕೆಯಾದಂತಾಗಿದೆ.

ಇಂದು ಪತ್ತೆಯಾದ ಪ್ರಕರಣಗಲ್ಲಿ 24 ವರ್ಷದ ಯುವಕ ಪಿ-2819 ಸಂಪರ್ಕ ಹೋಂದಿದ್ದು, 45 ವರ್ಷದ ಮಹಿಳೆ ಪಿ-1483 ಸಂಪರ್ಕ, 33 ವರ್ಷದ ಮಹಿಳೆ ಪಿ-926 ರ ಸಂಪರ್ಕ ಹಾಗೂ 35 ವರ್ಷದ ಪುರುಷ ಪಿ-1253 ರ ಸಂಪರ್ಕಿತರಾಗಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ಗುಣಮುಖರಾದ 104 ಜನರಿಗೆ ಬಿಡುಗಡೆ ಭಾಗ್ಯ ದೊರೆತಿದೆ. ಇಂದು ಗುಣಮುಖರಾದ 20 ಜನರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಗುಣಮುಖರಾದ 619, 754, 914, 917, 1061, 1251, 1252, 1253, 1254, 1255, 1309, 1365, 1366, 1367, 1368, 1369, 1370, 1371, 137 ಮತ್ತು 1373 ಆಸ್ಪತ್ರೆಯಿಂದ ಮನೆ ಸೇರಿದರು. ಜಿಲ್ಲೆಯಲ್ಲಿ ಒಟ್ಟು 150 ಪ್ರಕರಣಗಳ ಪೈಕಿ ಇದುವರೆಗೆ ಒಟ್ಟು 104 ಜನರು ಬಿಡುಗಡೆ ಹೊಂದಿದ್ದಾರೆ. 04 ಸಾವು ಸಂಭವಿಸಿದ್ದು, ಒಟ್ಟು 42 ಸಕ್ರಿಯ ಪ್ರಕರಣಗಳಿವೆ.



