ಡಿವಿಜಿ ಸುದ್ದಿ, ದಾವಣಗೆರೆ: ಬಿಬಿಎಂಪಿ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರಿಗೆ ಕೊರೊನಾ ಪಾಸಿಟಿವ್ ನಿನ್ನೆ ರಾತ್ರಿ ದೃಢಪಟ್ಟ ಹಿನ್ನೆಲೆ ,ಇಂದು ಬೆಳಗ್ಗೆ ಆರೋಗ್ಯ ಅಧಿಕಾರಿಗಳು ಕಾರ್ಪೊರೇಟರ್ ವಶಕ್ಕೆ ಪಡೆಯಲು ಮನೆಗೆ ಆಗಮಿಸಿದ್ದಾರೆ.
ಇಮ್ರಾನ್ ಪಾಷಾ ಕಾರ್ಪೊರೇಟರ್ ಆಗಿದ್ದ ಹಿನ್ನೆಲೆ ಹೆಚ್ಚಿನ ಅಧಿಕಾರಿಗಳು ಆಗಮಿಸಿದ್ದಾರೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ತಮ್ಮ ವಾರ್ಡ್ ನಲ್ಲಿ ಆಹಾರ ಕಿಟ್ ವಿತರಣೆ, ಅಧಿಕಾರಿಗಳ ಜೊತೆ ಚರ್ಚೆ ಸೇರಿದಂತೆ ಸಾಕಷ್ಟು ಜನರ ಜೊತೆ ಕಾರ್ಪೊರೇಟರ್ ಸಂಪರ್ಕ ಹೊಂದಿದ್ದಾರೆ. ಈ ಹಿನ್ನೆಲೆ ಇಮ್ರಾನ್ ಪಾಷಾ ಅವರಿಗೆ ಕೊರೊನಾ ಪಾಸಿಟಿವ್ ಪತ್ತೆಯಾದ ನಂತರ, ಅವರ ಜೊತೆ ಸಂಪರ್ಕ ಹೊಂದಿದವರಲ್ಲಿ ಭಯ ಉಂಟಾಗಿದೆ.
ಇದೀಗ ಕಳೆದ 13 ಗಂಟೆಯಿಂದ ಮನೆಯಲ್ಲಿಯೇ ಇರುವ ಕಾರ್ಪೊರೇಟರ್ ಇಮ್ರಾನ್ ಪಾಷಾ, ಅವರನ್ನು ವಶಪಡಿಸಿಕೊಳ್ಳು ಅಧಿಕಾರಿಗಳು ಆಗಮಿಸಿದರೂ, ಇನ್ನು ಕೂಡ ಮನೆಯಿಂದ ಹೊರ ಬಂದಿಲ್ಲ. ಹೀಗಾಗಿ ಒಂದಿಷ್ಟು ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.



