ಡಿವಿಜಿ ಸುದ್ದಿ, ದಾವಣಗೆರೆ: ಆನ್ ಲೈನ್ ಮೂಲಕ ಫುಡ್ ಪಾರ್ಸಲ್ ಗೆ ರಾತ್ರಿ 12 ಗಂಟೆವರೆಗೆ ಅವಕಾಶ ಕಲ್ಪಿಸಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶ ಹೊರಡಿಸಿದ್ದಾರೆ.
ಆನ್ ಲೈನ್ ನಲ್ಲಿ ಬುಕ್ ಮಾಡಿದವರಿಗೆ ಮಾತ್ರ ಪಾರ್ಸಲ್ ಗೆ ಅವಕಾಶ ನೀಡಲಾಗಿದೆ. ಆನ್ ಲೈನ್ ಸಂಸ್ಥೆಯ ವ್ಯಕ್ತಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕರ್ತವ್ಯ ನಿರತ ಪೋಲಿಸ್ನವರು ಕ್ರಮವಹಿಸಬೇಕು ಈ ಕುರಿತು ಗ್ರಾಹಕರು ಮನೆಗೆ ಪಾರ್ಸಲ್ ನೀಡುವ ವ್ಯಕ್ತಿಗಳಿಗೆ ಸಹಕರಿಸುವಂತೆ ತಮ್ಮ ಅಧೀನ ಪೋಲಿಸ್ ಸಿಬ್ಬಂದಿಗಳಿಗೆ ಸೂಕ್ತ ನಿದೇರ್ಶನ ನೀಡಲು ಜಿಲ್ಲಾ ಪೋಲಿಸ ವರಿಷ್ಟಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ತಿಳಿಸಿದ್ದಾರೆ.



