ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯಲ್ಲಿ ಸತತವಾಗಿ ಪಾಸಿಟಿವ್ ಪ್ರಕರಣಗಳು ಏರಿದಷ್ಟೇ ವೇಗದಲ್ಲಿ ಸೋಂಕಿತರು ಗುಣಮುಖರಾಗಿ ಹೊರ ಬಂದಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 142 ಪಾಸಿಟಿವ್ ಪ್ರಕರಣಗಳ ಪೈಕಿ ಇಂದು ಗುಣಮುಖರಾದ 13 ಜನ ಸೇರಿದಂತೆ ಒಟ್ಟು 79 ಜನರು ಗುಣಮುಖರಾಗಿ ಮನೆ ಸೇರಿದ್ದಾರೆ.
ದಾವಣಗೆರೆ ಜಿಲ್ಲಾ ಆಸ್ಪತ್ರೆಯಿಂದ ಇಂದು ಗುಣಮುಖರಾದ 13 ಜನರನ್ನು ಬಿಡುಗಡೆಗೊಳಿಸಿ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು ಬೀಳ್ಕೊಡುಗೆ ನೀಡಿದರು.
ರೋಗಿ ಸಂಖ್ಯೆ 615, 626, 633, 634, 727, 733, 737, 756, 776, 851, 1186, 1248 ಮತ್ತು 1249 ಪ್ರಕರಣಗಳು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡರು. ಜಿಲ್ಲೆಯಲ್ಲಿ ಒಟ್ಟು 142 ಪ್ರಕರಣಗಳ ಪೈಕಿ 79 ಜನರು ಬಿಡುಗಡೆ ಹೊಂದಿದ್ದಾರೆ. 4 ಜನ ಮೃತಪಟ್ಟಿದ್ದು, ಇನ್ನು 59 ಸಕ್ರಿಯ ಪ್ರಕರಣಗಳು ಸಕ್ರಿಯವಾಗಿವೆ.



